ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ನೆರವಿಗೆ ಬಂದ ಶಿವರಾಜ್ ಕುಮಾರ್
ಭಾನುವಾರ, 10 ಫೆಬ್ರವರಿ 2019 (08:07 IST)
ಬೆಂಗಳೂರು: ಈ ಬಾರಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಧನರಾಜ್ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ ಧನರಾಜ್ ಗೆ ಶಿವರಾಜ್ ಕುಮಾರ್ ಕಡೆಯಿಂದ ಒಳ್ಳೆ ಆಫರ್ ಬಂದಿದೆಯಂತೆ.
ಶಿವರಾಜ್ ಕುಮಾರ್ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾಗ ಎಲ್ಲಾ ಸ್ಪರ್ಧಿಗಳನ್ನು ಭೇಟಿಯಾಗಿದ್ದರು. ಇದೀಗ ರಿಯಾಲಿಟಿ ಶೋ ಮುಗಿದ ಮೇಲೂ ಶಿವಣ್ಣ ಯಾರನ್ನೂ ಮರೆತಿಲ್ಲ. ಇದಕ್ಕೂ ಮೊದಲು ನೇಹಾ ಪಾಟೀಲ್ ಗೆ ಆಫರ್ ಕೊಡುವ ಮೂಲಕ ಸುದ್ದಿಯಾಗಿದ್ದ ಶಿವಣ್ಣ ಈಗ ಧನರಾಜ್ ಗೆ ಆಫರ್ ಕೊಟ್ಟಿದ್ದಾರೆ.
ಶಿವರಾಜ್ ಕುಮಾರ್, ಬಾಲಿವುಡ್ ತಾರೆ ವಿವೇಕ್ ಓಬೇರಾಯ್ ತಾರಾಗಣದಲ್ಲಿ ಮೂಡಿಬರುತ್ತಿರುವ ‘ರುಸ್ತುಂ’ ಸಿನಿಮಾದಲ್ಲಿ ಧನರಾಜ್ ಗೆ ಅಭಿನಯಿಸಲು ಒಂದು ಅವಕಾಶ ಮಾಡಿಕೊಡುವ ಮೂಲಕ ಶಿವಣ್ಣ ತಮ್ಮ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ