ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್
ಹಿಂದೆಯೂ ಹಲವು ಬಾರಿ ಈ ಮೂವರೂ ಸಹೋದರರು ಜತೆಯಾಗಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಒತ್ತಾಯ ಕೇಳಿಬಂದಿತ್ತು. ಈ ವರ್ಷವಾದರೂ ಅದು ನೆರವೇರಬಹುದು ಎಂದು ರಾಘಣ್ಣ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಕತೆಯ ಹುಡುಕಾಟದಲ್ಲಿದ್ದೇವೆ. ಅಂತಹ ಒಳ್ಳೆಯ ಕತೆ ಬಂದರೆ ಈ ವರ್ಷವೇ ಒಟ್ಟಾಗಿ ನಟಿಸುತ್ತೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಸಿಹಿ ಸುದ್ದಿಕೊಟ್ಟಿದ್ದಾರೆ.