ಕಾನ್ ಫೆಸ್ಟಿವಲ್ ನಲ್ಲಿ ಮಿಂಚಲಿದ್ದಾರೆ ಕನ್ನಡಿಗ ರಘು ದೀಕ್ಷಿತ್

ಶುಕ್ರವಾರ, 20 ಮೇ 2022 (09:53 IST)
ಬೆಂಗಳೂರು: ಖ್ಯಾತ ಸಿನಿಮೋತ್ಸವ ಕಾನ್ ಫೆಸ್ಟಿವಲ್ ನಲ್ಲಿ ಈ ಬಾರಿ ಕನ್ನಡಿಗ ರಘು ದೀಕ್ಷಿತ್ ಕಾರ್ಯಕ್ರಮ ನೀಡಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಕಾನ್ ಉತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಬಾಲಿವುಡ್ ದಿಗ್ಗಜರು ತೆರಳಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಿರೂಪಕರಲ್ಲೊಬ್ಬರಾಗಿದ್ದಾರೆ.

ಇದರ ನಡುವೆ ಕನ್ನಡದ ಪ್ರತಿಭೆ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನಾಳೆ ನಿಗದಿಯಾಗಿದೆ. ಇದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ