ನಾಟಿಕೋಳಿಯಿಂದ ರಾಗಿಣಿ ಔಟ್: ಮುಂಗಡ ಹಣ ವಾಪಾಸಾತಿಗೆ ಮನವಿ

ಶನಿವಾರ, 2 ಮೇ 2015 (16:15 IST)
ನಟಿ ರಾಗಿಣಿ ಅವರು ನಾಯಕಿಯಾಗಿರುವ ನಾಟಿಕೋಳಿ ಚಿತ್ರಕ್ಕೆ 1ಕೋಟಿಗೂ ಮೀರಿ ಖರ್ಟು ಮಾಡಲಾಗಿದ್ದು, ಆ ಹಣವನ್ನು ವಾಪಾಸ್ ಕೊಡಿಸುವಂತೆ ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. 
 
ಹೌದು, ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ವಾರದ ಹಿಂದಷ್ಟೇ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದ ರಾಗಿಣಿ ದ್ವಿವೇದಿ ವಿರುದ್ಧ ನಾಟಿಕೋಳಿ ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. 
 
ದೂರಿನಲ್ಲೇನಿದೆ ? 
ಚಿತ್ರದ ಫೋಟೋ ಶೂಟ್‌ಗಾಗಿ 2ಲಕ್ಷ, ಆಭರಣದ ಬಾಡಿಗೆ 6ಲಕ್ಷ ಹಾಗೂ ರಾಗಿಣಿ ಅವರು ನಾಯಕಿಯಾದ ಹಿನ್ನೆಲೆಯಲ್ಲಿ 10ಲಕ್ಷ ಹೀಗೆ ಚಿತ್ರಕ್ಕಾಗಿ ಈಗಾಗಲೇ 1 ಕೋಟಿಗೂ ಮೀರಿ ಖರ್ಚು ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಅದನ್ನು ನಟಿ ರಾಗಿಣಿ ಅವರಿಂದ ವಾಪಾಸ್ ಕೊಡಿಸಿ. ಅಲ್ಲದೆ ಆಕೆ ನನ್ನ ಚಿತ್ರದ ನಾಯಕಿ ಪಾತ್ರಕ್ಕೆ ಅವರು ಬೇಡ ಎಂದು ಮನವಿ ಮಾಡಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟೇಶ್, ನಾನು ನಟಿ ರಾಗಿಣಿ ವಿರುದ್ಧ ದೂರು ನೀಡಿಲ್ಲ. ಬದಲಾಗಿ ಮಂಡಳಿಗೆ ರಾಗಿಣಿ, ನನ್ನ ಆತಂಕಕ್ಕೆ ಕಾರಣರಾದ ಶಿವಪ್ರಕಾಶ್ ಹಾಗೂ ನನ್ನನ್ನು ಕರೆಸಿ ವಿವಾದದ ಬಗ್ಗೆ ಮಾತನಾಡಿ ಒಂದು ಫಲಿತಾಂಶವನ್ನು ನೀಡಿ ಎಂದಷ್ಟೇ ಮನವಿ ಮಾಡಿದ್ದೇನೆ ಎಂದರು. 
 
ಇದೇ ವೇಳೆ, ನಾನು ನಟಿ ರಾಗಿಣಿಯೊಂದಿಗೆ ಮಾತನಾಡಿಲ್ಲ. ಆದರೆ ನಡೆದ ಗಲಾಟೆಯಿಂದ ಆತಂಕಕ್ಕೊಳಗಾಗಿದ್ದು, ಅವರನ್ನು ಚಿತ್ರದ ನಟಿಯನ್ನಾಗಿ ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇನೆ. ಏಕೆಂದರೆ ಚಿತ್ರೀಕರಣಕ್ಕೂ ಮುನ್ನವೇ ವಿವಾದ ಸೃಷ್ಟಿಯಾಗಿದ್ದು, ಮುಂದೆ ಏನಾಗುವುದೋ ಎಂಬ ಭಯ ಕಾಡುತ್ತಿದೆ. ಆದರೆ ಅವರು ನಾನು ಚಿತ್ರೀಕರಣವನ್ನು ಮುಗಿಸಿಕೊಡುವೆ ಎಂಬ ಭರವಸೆ ನೀಡಿದಲ್ಲಿ ನಾಯಕಿಯಾಗಿ ಮುಂದುವರಿಯಲು ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ. 
 
ನಡೆದಿದ್ದ ವಿವಾದವೇನು ?
ಕಳೆದ ಬುಧವಾರ ನಗರದ ವಿಲ್ಸನ್ ಗಾರ್ಡನ್‌ನಲ್ಲಿ ಚಿತ್ರದ ಫೋಟೋ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಶಿವಪ್ರಕಾಶ್ ಎಂಬ ವ್ಯಕ್ತಿ ಆಗಮಿಸಿ ಚಿತ್ರದ ನಾಯಕ ಅರುಣ್ ಗೌಡ ಸೇರಿದಂತೆ ನಿರ್ದೇಶಕರು ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಹಲ್ಲೆ ವೇಳೆ ನನ್ನ ಪ್ರಿಯತಮೆಯೊಂದಿಗೆ ಯರ್ರಾಬಿರ್ರಿ ನಡೆದುಕೊಂಡಲ್ಲಿ.... ಉಶಾರ್ ಎಂದೆಲ್ಲಾ ಬೆದರಿಕೆ ಹಾಕಿದ್ದರು. ಈ ವೇಳೆ ಚಿತ್ರದ ನಿರ್ದೇಶಕ ಹಾಗೂ ಶಿವಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಮಂಡಳಿಗೆ ಪ್ರಕರಣದ ಇತ್ಯರ್ಥಕ್ಕಾಗಿ ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ