ಸಲಾರ್ ಮೊದಲ ಟಿಕೆಟ್ ಖರೀದಿಸಿದ ಸ್ಟಾರ್ ಡೈರೆಕ್ಟರ್ ರಾಜಮೌಳಿ

ಶನಿವಾರ, 16 ಡಿಸೆಂಬರ್ 2023 (11:45 IST)
Photo Courtesy: Twitter
ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಹೈದರಾಬಾದ್ ನಲ್ಲಿ ಪ್ರಮೋಷನ್ ನಿಮಿತ್ತ ನಾಯಕ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟಾರ್ ನಿರ್ದೇಶಕ ರಾಜಮೌಳಿ ಕೂಡಾ ಪಾಲ್ಗೊಂಡಿದ್ದರು.

ಈ ವೇಳೆ ರಾಜಮೌಳಿ ಸಲಾರ್ ಸಿನಿಮಾದ ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆ. ನಿಜಾಮ್ ನಲ್ಲಿ ಬೆಳಿಗ್ಗೆ 7 ಗಂಟೆಯ ಮೊದಲ ಶೋ ವೀಕ್ಷಿಸಲು ಸಲಾರ್ ತಂಡವೇ ರಾಜಮೌಳಿಗೆ ಮೊದಲ ಟಿಕೆಟ್ ನೀಡಿ ಗೌರವಿಸಿದೆ.

ಸಲಾರ್ ಸಿನಿಮಾದ ಪ್ರಚಾರದಲ್ಲಿ ಪ್ರಭಾಸ್ ಗೆ ರಾಜಮೌಳಿ ಕೂಡಾ ಸಾಥ್ ನೀಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಡಿಸೆಂಬರ್ 22 ರಂದು ಬಹುಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ