ಇಡೀ ಸಿನಿಮಾ ಜಗತ್ತನ್ನೇ ಬೆದರಿಸುತ್ತಿದೆ ರಾಜಮೌಳಿ RRR ಸಿನಿಮಾ ಕ್ಯಾರೆಕ್ಟರ್

ಶನಿವಾರ, 24 ಅಕ್ಟೋಬರ್ 2020 (10:59 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ಅವರ RRR ಸಿನಿಮಾ ಬಹುನಿರೀಕ್ಷೆಯ ಸಿನಿಮಾವಾಗಿದ್ದು, ಇದರ ವಿಡಿಯೋ ನೋಡಿದರೆ ಇಡೀ ಸಿನಿಮಾ ಜಗತ್ತನ್ನೇ ಬೆದರಿಸುತ್ತಿದೆ ಎನ್ನಲಾಗಿದೆ.

ಹೌದು.  ನಿರ್ದೇಶಕ ರಾಜಮೌಳಿ ಅವರ RRR ಸಿನಿಮಾದ ಕಥಾ ವಸ್ತು ಭಾರತೀಯ ಸ್ವಾತಂತ್ರ್ಯದ ಮೊದಲು ನಡೆದಿರುವ ಘಟನೆಯ ಕುರಿತಾಗಿದೆ. ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಾಮ್ ಬೀಮ್ ಎಂಬ ಇಬ್ಬರು ಸೈನಿಕರ ನೈಜ ಕಥೆಯಾಗಿದೆ. ಇದರಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ನಟ ರಾಮ್ ಚರಣ್ ಹಾಗೂ ಕೊಮರಾಮ್ ಬೀಮ್ ಪಾತ್ರದಲ್ಲಿ ಜೂನಿಯರ್ ಎನ್ ಟಿಆರ್ ನಟಿಸುತ್ತಿದ್ದಾರೆ.

ಈಗಾಗಲೇ  ರಾಮ್ ಚರಣ್ ಜನ್ಮದಿನದಂದು ಅವರ ಪಾತ್ರದ ವಿಡಿಯೋ ಬಿಡುಗಡೆಯಾಗಿದ್ದು, ಇದು ಭಾರತೀಯ ಚಿತ್ರರಂಗವನ್ನು ಹಿಂತಿರುಗಿ ನೋಡುವಂತೆ ಮಾಡಿದೆ. ಇದೀಗ ಜೂನಿಯರ್ ಎನ್ ಟಿಆರ್ ಪಾತ್ರದ ವಿಡಿಯೋ ಬಿಡುಗಡೆಯಾಗಿದ್ದು, ಇದು ಇಡೀ ಸಿನಿಮಾ ಜಗತ್ತನ್ನೇ ಬೆರಗುಗೊಳಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ