ಹೈದರಾಬಾದ್ : ತಮಿಳಿನ ಸೂಪರ್ ಹಿಟ್ ಚಿತ್ರ ‘ವೇದಲಂ’ ತೆಲುಗಿಗೆ ರಿಮೇಕ್ ಆಗಲಿದ್ದು, ಇದರಲ್ಲಿ ಖ್ಯಾತ ನಟರೊಬ್ಬರು ನಟಿಸುತ್ತಿದ್ದಾರಂತೆ.
ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸುತ್ತಿದ್ದಾರಂತೆ. ಇದನ್ನು ಶಕ್ತಿ ಖ್ಯಾತಿಯ ಮೆಹರ್ ರಮೇಶ್ ನಿರ್ದೇಶಿಸಲಿದ್ದಾರಂತೆ. ಈ ಚಿತ್ರದಲ್ಲಿ ಮೆಗಾಸ್ಟಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರಿಂದ ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಲು ರಾಮ್ -ಲಕ್ಷ್ಮಣ್ ಜೋಡಿಯ ಜೊತೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.
ಅನಿಲ್ ಸುಂಕರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು 2021ರಲ್ಲಿ ಇದರ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಇತ್ತೀಚೆಗೆ ಸಾಯಿ ಪಲ್ಲವಿ ಅಥವಾ ಕೀರ್ತಿ ಸುರೇಶ್ ಅವರು ಚಿರಂಜೀವಿ ಅವರ ಸಹೋದರಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.