ತಮನ್ನಾಳನ್ನು ಆಶ್ಚರ್ಯಗೊಳಿದ ರಾಜಮೌಳಿ....?!

ಮಂಗಳವಾರ, 16 ಡಿಸೆಂಬರ್ 2014 (10:53 IST)
ಪಾಪದ ಸ್ಥಿತಿಯಲ್ಲಿ ಇದ್ದಾಳೆ ತಮನ್ನ ಭಾಟಿಯ. ಅದಕ್ಕೆ ಕಾರಣ ಆಕೆಯ ನಿರಂತರವಾದ ಸೋಲು. ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ಅಭಿನಯಿಸಿದ ಆಗಡು ಚಿತ್ರ ನಿರೀಕ್ಷೆ ಮೀರಿದ್ದಕ್ಕಿಂತ ಹೆಚ್ಚಿನ ಸೋಲು ಅನುಭವಿಸಿದ ಕಾರಣದಿಂದ ಆಕೆಗೆ ಟಾಲಿವುಡ್‌ನಲ್ಲಿ ನೆಲೆ ಕಾಣುವ ಆಸೆಯ ಮೇಲೆ ಬಲವಾದ ಪೆಟ್ಟು ಬಿದ್ದಿದೆ ಎಂದೇ ಹೇಳ ಬಹುದಾಗಿದೆ. ಆದರೆ ಆಕೆಯ ಆಸೆ ಇನ್ನು ಕಮರಿಲ್ಲ. ಅದಕ್ಕೆ ಕಾರಣ ಬಾಹುಬಲಿ. ಈ ಚಿತ್ರ ಖಂಡಿತವಾಗಿ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಹೊಂದಿರುವ ಏಕೆ ಈಗ ಆ ಚಿತ್ರದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಹೊಂದಿದ್ದಾಳೆ. 
ಈ ಚಿತ್ರದ ಪ್ರಮುಖ ಹೀರೋಯಿನ್ ಅನುಷ್ಕ ಆಗಿದ್ದರೂ ಸಹಿತ ತನ್ನದು ಪ್ರಮುಖ ಪಾತ್ರ ಎಂದು ಎಲ್ಲರ ಮುಂದೆ ಬೀಗುತ್ತಿದ್ದಾಳೆ. ಅದಕ್ಕೆ ಪೂರಕವಾದ ಹಗನಸು ಕಾಣುತ್ತಿದ್ದಾಳೆ. ಈ ಸಿನಿಮಾಕ್ಕೆ ಸಂಬಂಧಪಟ್ಟ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯಿತು. ಆ ಶೂಟಿಂಗ್‌ನಲ್ಲಿ ಭಾಗವಹಿಸಿದ ತಮನ್ನಾಗೆ ನಿದೇಶಕ ರಾಜಮೌಳಿ ನಿರೀಕ್ಷಿಸದ ಒಂದು ಕಾಣಿಕೆ ನೀಡಿದ್ದಾರೆ ಆಕೆಗೆ. ಆ ಕಾಣಿಕೆ ಕಂಡು ತಮ್ಮುಗೆ ಆಶ್ಚರ್ಯ ಆಯ್ತಂತೆ. ಆ ಗಿಫ್ಟ್ ಏನ್ ಗೊತ್ತೇ ಒಂದು ಮೀಟರ್ ಅಡಿಯ ಚಾಕೋಲೆಟ್. ಆ ಸಂತೋಷ ತಡೆಯಲಾಗದೆ ತಮ್ಮು ಚಾಕ್ಲೆಟ್ ಫೋಟೋ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಹಾಕಿ ನಲಿದಿದ್ದಾಳೆ.
 
ಬಲ್ಗೇರಿಯಾದಲ್ಲಿ ಒಂದು ದಿನದ ಶೂಟಿಂಗ್ ಆದ ಬಳಿಕ ನಿರ್ದೇಶಕರು ನನಗೆ ಒಂದು ದೊಡ್ಡ ಚಾಕೋಲೆಟ್ ನೀಡಿದ್ದಾರೆ. ಈವರೆಗೂ ನನ್ನ ಬದುಕಲ್ಲಿ ಇಷ್ಟು ದೊಡ್ಡ ಚಾಕೋಲೆಟ್ ನೋಡೇ ಇಲ್ಲ ಎಂದು ಹೇಳಿದ್ದಾಳೆ ಈ ಚೆಲುವೆ. ಸಾಮಾನ್ಯವಾಗಿ ತನ್ನ ಚಿತ್ರದ ಕಲಾವಿದರಿಗೆ ಈರೀತಿಯ ಗಿಫ್ಟ್ ನೀಡುವ ಅಭ್ಯಾಸ ಹೊಂದಿಲ್ಲ ರಾಜಮೌಳಿ, ಅಂತಾಹುದರಲ್ಲಿ ಈ ರೀತಿ ಗಿಫ್ಟ್ ಕೊಟ್ಟಿದ್ದಾರೆಂದರೆ ?!

ವೆಬ್ದುನಿಯಾವನ್ನು ಓದಿ