ಕಾಲಿವುಡ್‌ಗೆ ಶಾಕ್ ನೀಡಿದ ರಜನಿಕಾಂತ್

ಶನಿವಾರ, 31 ಜನವರಿ 2015 (09:59 IST)
ಯಾಕೆ ಅವರು ಶಾಕ್ ನೀಡಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುವುದು ಸತ್ಯ. ಅದರ ಬಗ್ಗೆ ಮಾತಾಡುವ ಮುನ್ನ ಈಗ ಐ ಚಿತ್ರದ ಬಗ್ಗೆ ಮಾತಾಡೋಣ. ಶಂಕರ್ ಅವರ ನಿರ್ದೇಶನದ  ಚಿತ್ರ ಐ ಸೋತಿದೆ ಎನ್ನುವ ಸುದ್ದಿಯ ನಡುವೆಯೂ 180 ಕೋಟಿ ರೂಗಳನ್ನು ಗಳಿಕೆ ಮಾಡಿ ಸೋತು ಗೆದ್ದಿದೆ ಎನ್ನುವ ಸಂಗತಿಯನ್ನು ತನ್ನದಾಗಿಸಿ ಕೊಂಡಿದೆ. ಈಗ ಶಂಕರ್ ಅವರ ಮುಂದಿನ ಚಿತ್ರದ ಕೆಲಸಗಳು ಭರದಿಂದ ಸಾಗಿವೆ.

ಈ ಚಿತ್ರಕ್ಕೆಂದು ಬಗೆಬಗೆಯ ಹೀರೊಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಇದ್ದಾರಂತೆ ಶಂಕರ್. ಹಾಗಂತ ಕಾಲಿವುಡ್ ನಿಂದ ಸುದ್ದಿ ಬಂದಿದೆ.  ಈಗ ಐ ಚಿತ್ರದಿಂದ ನಿರ್ಮಾಪಕರಿಗೆ  ನಷ್ಟವಾಗದೆ ಇದ್ದರೂ ಸಹಿತ ಹಂಚಿಕೆದಾರರಿಗೆ  ಇದು ನಷ್ಟ ಉಂಟು ಮಾಡಿದೆ. ಈ ನಷ್ಟ ತುಂಬಲು ಶಂಕರ್ ಅವರು ರಜನಿಕಾಂತ್ ಅವರ ನಟನೆಯ ರೋಬೋ ಚಿತ್ರದ ಮುಂದುವರೆದ ಭಾಗ ರೋಬೋ2 ವನ್ನು ಮತ್ತೆ ಆರಂಭ ಮಾಡಲಿದ್ದಾರೆ.

ಈಗಾಗಲೇ ಈ ಚಿತ್ರದಲ್ಲಿ ನಟಿಸಲು ವಿಜಯ್, ಆಮೀರ್ ಖಾನ್ ಮುಂತಾದವರು  ಮುಂದೆ ಬಂದಿದ್ದರು ಸಹಿತ, ಕಳೆದ ಎರಡು ವರ್ಷಗಳಿಂದ ತಮ್ಮ ಅಭಿಮಾನಿಗಳ ಮನ ಗೆಲ್ಲಲಾಗದೇ  ಸೋತಿರುವ ರಜನಿಕಾಂತ್ ಅವರೇ ನಟಿಸುವ ಸಾಧ್ಯತೆಗಳು   ಕಾಲಿವುಡ್ ಮಾಹಿತಿ ಕೇಂದ್ರದಿಂದ ಹೊರ ಬಂದಿದೆ. ಅದಕ್ಕಾಗಿ ರಜನಿ ಸಿದ್ಧತೆ ನಡೆಸಿದ್ದು ಎಷ್ಟು ಬೇಗ ಆದರೆ ಅಷ್ಟು ಬೇಗ ಚಿತ್ರ ಪೂರ್ಣ ಮಾಡುವಂತೆ ಶಂಕರ್ ಗೆ ಹೇಳಿದ್ದಾರೆ.

ಒಟ್ಟಾರೆ ಈಗ ರೋಬೋ2 ಕ್ಕೆ ರಂಗ  ಸಿದ್ಧವಾಗಿದೆ. ಅಲ್ಲದೆ ಈ ಚಿತ್ರಕ್ಕೆ ಸಂಬಂಧಪಟ್ಟಂತೆ ರಜನಿ ಲುಕ್ ಗೆ ಹೊಂದುವ ಡಿಜೈನಿಂಗ್ ಸಹಿತ ನಡೆದಿದ್ದು, ಅದರ ಕೆಲಸವು ಸಹಿತ ಪೂರ್ಣವಾಗಿದೆ ಎಂದು ಹೇಳಿದ್ದಾರೆ ಕಾಲಿವುಡ್ ಮಂದಿ. ಒಟ್ಟಾರೆ ಇಬ್ಬರು ಅಸಮಾನ್ಯ ಪ್ರತಿಭೆಗಳು ರೋಬೋ ದಿಂದ ಜೀವ ಪಡೆಯಲು ಸಿದ್ಧತೆ ನಡೆಸಿದ್ದಾರೆ. ರಜನಿಕಾಂತ್ ಆರಂಭದಲ್ಲಿ ತಾವು ರೋಬೋ 2  ರಲ್ಲಿ ನಟಿಸಲ್ಲ ಎಂದು ಹೇಳಿದ್ದರು. ಆದರೆ ಸಾಲುಗಳು ಮತ್ತೆ ಆ ಚಿತ್ರದಲ್ಲಿ ಅಭಿನಯಿಸುವಂತೆ ಮಾಡಿದೆ. ಇದರಿಂದ ಕಾಲಿವುಡ್ ಮಂದಿ ಆಶ್ಚರ್ಯ ಹೊಂದಿದ್ದಾರೆ!

ವೆಬ್ದುನಿಯಾವನ್ನು ಓದಿ