ತನ್ನ ಮೇಲಿನ ಜೋಕುಗಳಲ್ಲಿ ರಜನಿಗೆ ಇಷ್ಟಪಟ್ಟಿದ್ದು

ಗುರುವಾರ, 15 ಡಿಸೆಂಬರ್ 2016 (12:49 IST)
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಂತರ್ಜಾಲದಲ್ಲಿ ಸಾಕಷ್ಟು ಜೋಕುಗಳು ಹರಿದಾಡುತ್ತಿರುತ್ತವೆ. ರಜನಿಯನ್ನು ಮಾನವಾತೀತ ವ್ಯಕ್ತಿಯಾಗಿ, ಯಾರಿಗೂ ಸಾಧ್ಯವಾಗದ ಕೆಲಸಗಳನ್ನು ಮಾಡುವಂತೆ ಚಿತ್ರೀಕರಿಸಿ ಜೋಕ್‌ಗಳನ್ನು ಸೃಷ್ಟಿಸುತ್ತಿರುತ್ತಾರೆ ಕೆಲವರು.
 
ಈ ರೀತಿಯ ಜೋಕುಗಳ ವಿಚಾರದಲ್ಲಿ ರಜನಿಕಾಂತ್ ಹೇಗೆ ಫೀಲ್ ಆಗುತ್ತಿರುತ್ತಾರೆ? ಈ ಪ್ರಶ್ನೆಗೆ ರಜನಿಕಾಂತ್ ಮಗಳು ಐಶ್ವರ್ಯಾ ಉತ್ತರ ಕೊಟ್ಟಿದ್ದಾರೆ. ತನ್ನ ಮೇಲೆ ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜೋಕುಗಳೆಂದರೆ ರಜನಿಗೆ ತುಂಬಾ ಇಷ್ಟವಂತೆ. ಆ ಜೋಕ್‌ಗಳನ್ನು ಚೆನ್ನಾಗಿ ಎಂಜಾಯ್ ಮಾಡ್ತಾರಂತೆ.
 
ಐಶ್ವರ್ಯಾ, ಸೌಂದರ್ಯ ಇಬ್ಬರೂ ಆಗಾಗ ಹೊಸ ಜೋಕುಗಳನ್ನು ರಜನಿಗೆ ಹೇಳಿ ನಗಿಸುತ್ತಿರುತ್ತಾರಂತೆ. ಇತ್ತೀಚೆಗೆ ಅಧಿಕ ಮೌಲ್ಯದ ನೋಟು ನಿಷೇಧದ ಬಳಿಕ ರಜನಿ ಮೇಲಿನ ಜೋಕು ತುಂಬಾ ಇಷ್ಟ ಆಯಿತಂತೆ. ಈ ಜೋಕು ಕೇಳಿ ರಜನಿ ಸಹ ಬಿದ್ದುಬಿದ್ದು ನಕ್ಕಿದರಂತೆ. ಇಷ್ಟಕ್ಕೂ ಆ ಜೋಕ್ ಯಾವುದೆಂದರೆ...
 
ತನ್ನ ಬಳಿ ಇರುವ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ರಜನಿಕಾಂತ್ ಬ್ಯಾಂಕ್‌ಗೆ ಹೋದರೆ....ಆಗ ಬ್ಯಾಂಕ್‌ಗಳೇ ರಜನಿಗೆ ತಮ್ಮ ಐಡಿ ಫ್ರೂಫ್‍ಗಳನ್ನು ಕೊಡುತ್ತವೆ ಅನ್ನೋದು ಜೋಕು. ಈ ಜೋಕನ್ನು ಇಂಟರ್‌ನೆಟ್ ನಲ್ಲಿ ಓದಿದ ಐಶ್ವರ್ಯಾ ಅವರಿಗೆ ಹೇಳಿದರಂತೆ. ಅದನ್ನು ನೆನೆಸಿಕೊಂಡು ರಜನಿ ಇನ್ನೂ ನಗುತ್ತಲೇ ಇದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ