ಆಸ್ಕರ್ ಅಕಾಡೆಮಿ ಪ್ರಶಸ್ತಿ ವಿಜೇತ ರಸೂಲ್ ಪೊಕುಟ್ಟಿ ಈ ಚಿತ್ರಕ್ಕೆ ಸೌಂಡ್ ಎಂಜಿಯರ್ ಆಗಿದ್ದು, ಅವರ ಉಪಸ್ಥಿತಿಯಲ್ಲಿ ರಜನಿ ಡಬ್ಬಿಂಗ್ ಹೇಳಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ರಸೂಲ್, ತಲೈವಾಗೆ ಕೆಲಸದ ಕಡೆಗಿನ ಶ್ರದ್ಧೆ ಸಾಮಾನ್ಯದ್ದಲ್ಲ. ಒಂದೇ ದಿನದಲ್ಲಿ ಮೂರು ರೀಲ್ ಮುಗಿಸಿದರೆಂದು, ಅವರ ಕಾರ್ಯವೈಖರಿ ನೋಡಿ ಚಕಿತನಾಗಿದ್ದೇನೆ ಎಂದಿದ್ದಾರೆ.
2.0 ಚಿತ್ರ ರೋಬೋ ಮುಂದುವರಿದ ಭಾಗ ಅಲ್ಲ. ಇದು ಸಂಪೂರ್ಣ ಭಿನ್ನವಾದ ಚಿತ್ರ ಎಂದು ರಸೂಲ್ ಹೇಳಿದ್ದಾರೆ. ಸುಮಾರು ರೂ.400 ಕೋಟಿ ಭಾರಿ ಬಜೆಟ್ನೊಂದಿಗೆ ನಿರ್ಮಿಸಿರುವ ಚಿತ್ರ. ಈ ಚಿತ್ರಕ್ಕೆ ಶಂಕರ್ ಆಕ್ಷನ್ ಕಟ್ ಹೇಳಿದ್ದು. ಅಕ್ಷಯ್ ಕುಮಾರ್ ಖಳನಟನಾಗಿ ಪಾತ್ರ ಪೋಷಿಸಿದ್ದಾರೆ. ಎಮಿ ಜಾಕ್ಸನ್ ಚಿತ್ರದ ನಾಯಕಿ. ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.