ಆದರೆ ಈ ಪ್ರಕರಣದ ಬಗ್ಗೆ ಈಗ ಪರಂವಾ ಸ್ಟುಡಿಯೋಸ್ ಸೋಷಿಯಲ್ ಮೀಡಿಯಾ ಪುಟದಲ್ಲಿ ರಕ್ಷಿತ್ ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಬಳಕೆಯಾಗಿದೆ ಎಂದು ಆರೋಪಿಸಲಾಗಿರುವ ಹಾಡುಗಳನ್ನು ಯಾವ ರೀತಿ ಬಳಸಲಾಗಿದೆ ಎಂದು ವಿಡಿಯೋ ಸಮೇತ ಪ್ರಕಟಿಸಿದ್ದಾರೆ. ಈ ಪೈಕಿ ಒಂದು ಹಾಡು ಟಿವಿಯಲ್ಲಿ ಪ್ರಸಾರವಾಗುತ್ತಿರುವುದನ್ನು ತೋರಿಸಿದ್ದರೆ ಮತ್ತೊಂದು ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾಡುತ್ತಿದ್ದಾಳೆ.
ತಮ್ಮ ಮೇಲೆ ಪ್ರಕರಣ ದಾಖಲಿಸಿರುವ ಎಂಆರ್ ಟಿ ಸಂಸ್ಥೆ ಸೇರಿದಂತೆ ಈ ರೀತಿ ತಕರಾರು ತೆಗೆಯುತ್ತಿರುವವರಿಗೆ ಕೃತಿ ಚೌರ್ಯ ಎಂದರೆ ಏನು ಎಂದು ತೋರಿಸಿಕೊಡುತ್ತೇವೆ ಎಂದು ರಕ್ಷಿತ್ ಹೇಳಿದ್ದಾರೆ. ನಾವು ಆ ಹಾಡುಗಳನ್ನು ಯಾವ ರೀತಿ ಬಳಕೆ ಮಾಡಿದ್ದೇವೆ ಎಂದು ಗಮನಿಸಬೇಕು. ನಿಜವಾಗಿಯೂ ಕೃತಿ ಚೌರ್ಯ ಎಂದರೆ ಏನು, ಅನುಮತಿಯಿಲ್ಲದೇ ಒಂದು ಹಾಡನ್ನು ಹೇಗೆ ಬಳಸಿಕೊಳ್ಳಬಾರದು ಎಂಬುದಕ್ಕೆ ಸ್ಪಷ್ಟನೆ ಸಿಗಲಿ. ಈ ಪ್ರಕರಣವನ್ನು ನಾವು ಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಈ ಘಟನೆ ನಮ್ಮಂತೆ ಸಂಕಷ್ಟ ಎದುರಿಸುವ ಅನೇಕರಿಗೆ ಪರಿಹಾರ ಮತ್ತು ತೊಂದರೆ ನೀಡುವವರಿಗೆ ಪಾಠವಾಗಲಿ ಎಂದು ರಕ್ಷಿತ್ ಅವರ ಪರಂವಾ ಸಂಸ್ಥೆ ಖಡಕ್ ಉತ್ತರ ನೀಡಿದೆ.