ಲವ್ ಬಗೆಗಿನ ಮಗನ ಮಾತು ಕೇಳಿ ರಕ್ಷಿತಾ ಫುಲ್ ಶಾಕ್‌

Sampriya

ಶನಿವಾರ, 15 ಮಾರ್ಚ್ 2025 (16:06 IST)
Photo Courtesy X
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಿನ್ನೆ ಅಪ್ಪು ಸಿನಿಮಾವನ್ನು ರೀ ರಿಲೀಸ್ ಮಾಡಲಾಯಿತು. ಪುನೀತ್ ಅವರನ್ನು ಮತ್ತೇ  ತೆರೆ ಮೇಲೆ ಕಂಡು ಅವರ ಅಭಿಮಾನಿಗಳು ಫುಲ್ ಖುಷ್ ಆದರೂ. ಇನ್ನೂ ಸಿನಿಮಾದ ನಟಿ ರಕ್ಷಿತಾ ಕೂಡಾ ತಮ್ಮ ಮಗನೊಂದಿಗೆ ಅಪ್ಪು ಸಿನಿಮಾವನ್ನು ನೋಡಿ ಖುಷಿಪಟ್ಟರು.

ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ರಕ್ಷಿತಾ ಮಗ ಸೂರ್ಯ, ಮೊದಲ ಬಾರಿಗೆ ಅಮ್ಮನನ್ನು ದೊಡ್ಡ ಪರದೆ ಮೇಲೆ ನೋಡುತ್ತಿದ್ದೇನೆ. ಹಾಗೂ ಅಪ್ಪು ಸರ್‌ ಅವರನ್ನು ಕೂಡ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ನೋಡುತ್ತಿದ್ದೇನೆ. ಅಪ್ಪು ಸಿನಿಮಾವನ್ನು ಅಮ್ಮನ ಫ್ಯಾನ್ಸ್‌ ಜೊತೆ ಅಪ್ಪು ಸರ್‌ ಫ್ಯಾನ್ಸ್‌ ಜೊತೆ ನೋಡಿ ತುಂಬಾ ಖುಷಿ ಆಯ್ತು' ಎಂದರು.

ಈ ವೇಳೆ ಮಾಧ್ಯಮದವರು, ಲವ್‌ ಮಾಡೋದು ಕಲಿತೀಯಾ? ಆಕ್ಟಿಂಗ್‌ ಮಾಡೋದಾ? ಎಂದು ಕೇಳಿದ್ದಾರೆ. ಸೂರ್ಯ ನಾಚಿಕೊಂಡು ಎಲ್ಲಾ ಎಂದು ಹೇಳಿದ್ದು, ಮಗನ ಉತ್ತರ ಕೇಳಿ ರಕ್ಷಿತಾ ಶಾಕ್‌ ಆಗಿದ್ದಾರೆ.

ಈ ಹಿಂದೆ ರಿಯಾಲಿಟಿ ಶೋಗೆ ಬಂದಿದ್ದ ಸೂರ್ಯ ತನಗೆ ಸಿನಿಮಾದಲ್ಲಿ ನಟಿಸಲು ಇಷ್ಟ ಎಂದಿದ್ದರು. ಇದಕ್ಕೆ ರಕ್ಷಿತಾ ಹೊಡಿತೀನಿ, ಸುಮ್ನಿರೂ ಎಂದು ಬಾಯಿ ಮುಚ್ಚಿಸಿದ್ದರು. ಇದೀಗ ಸೂರ್ಯನ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ