ಬಂದ ಬಂದ ಡಿಕೆ ಸಾಹೇಬ ಎಂದು ಹಾಡುತ್ತಿರುವ ರಕ್ಷಿತಾ ಪುತ್ರ ಸೂರ್ಯ

ಶುಕ್ರವಾರ, 24 ಅಕ್ಟೋಬರ್ 2014 (10:21 IST)
ನಿರ್ದೇಶಕ ಹಾಗೂ ನಟ ಪ್ರೇಂ ಮತ್ತು ನಟಿ -ರಾಜಕಾರಣಿ ರಕ್ಷಿತಾ ಅವರ ಮುದ್ದಿನ ಕೂಸು ಸೂರ್ಯ ಈಗ  ಬಣ್ಣ ಹಚಲು ಸಿದ್ಧತೆ ನಡೆಸಿದ್ದಾನೆ. ಮಾಸ್ಟರ್ ಸೂರ್ಯ ತನ್ನ ತಂದೆಯ ಚಿತ್ರದಲ್ಲಿ ಬಣ್ಣ ಹಚ್ಚಲು ಸಿದ್ಧತೆ ನಡೆಸಿರುವುದು ಈಗ ಗಾಂಧಿ ನಗರದ ಹಾಟ್ ಟಾಪಿಕ್ ಆಗಿದೆ

ಪ್ರೇಂ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ಡೀಕೆಯಲ್ಲಿ ಅವರ ಮಗ ನಟಿಸುತ್ತಿದ್ದಾನೆ. ಇದರ ಟೈಟಲ್ ಟ್ರಾಕ್ ನಲ್ಲಿ ಸೂರ್ಯ ಸ್ಟೆಪ್ಸ್ ಹಾಕುತ್ತಿದ್ದಾನೆ. 
 
ಸಾಕಷ್ಟು ಜನ ಇನ್ನು ಯಾಕೆ ಸೂರ್ಯ ಬಣ್ಣ ಹಚ್ಚಿಲ್ಲ ಎನ್ನುವ ಪ್ರಶ್ನೆ ಪ್ರೇಂ ಅವರ ಬಳಿ ಜನ ಕೇಳ್ತಾ ಇದ್ದರಂತೆ. ಅದಕ್ಕೆ ಅವರು ತಮ್ಮ ಚಿತ್ರ ಡೀಕೆಯಲ್ಲಿ ಸೂರ್ಯ ನಟಿಸಲು ವೇದಿಕೆ ಕಲ್ಪಿಸಿದ್ದಾರೆ. ಈ ಚಿತ್ರದ ಮೂಲಕ ಕ್ಯಾಮರ ಎದುರಿಸಿದ್ದಾನೆ ಸೂರ್ಯ. ಬಂದ ಬಂದ ಡೀಕೆ ಸಾಹೇಬ  ಹಾಡಿನ ಮೂಲಕ ಅಪಾರ ಸಂಖ್ಯೆಯ ಮಕ್ಕಳ ಜೊತೆ ತಾನು ಡ್ಯಾನ್ಸ್ ಮಾಡುತ್ತಿದ್ದಾನೆ ಸೂರ್ಯ. 

ವೆಬ್ದುನಿಯಾವನ್ನು ಓದಿ