ಮತ್ತೆ ತಾನು ಓದಿದ ಕಾಲೇಜು ಕಾರಿಡಾರಿನಲ್ಲಿ ರಕ್ಷಿತ್ ಶೆಟ್ಟಿ: ಆಂಕರ್ ಅನುಶ್ರೀ ಸಾಥ್

ಮಂಗಳವಾರ, 4 ಜುಲೈ 2023 (08:20 IST)
Photo Courtesy: Instagram
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾರ್ಯಕ್ರಮವೊಂದಕ್ಕೆ ತೆರಳಿ ವೇಳೆ ತಾವು ಕಲಿತ ನಿಟ್ಟೆ ಕಾಲೇಜಿನ ಕಾರಿಡಾರಿನಲ್ಲಿ ಸುತ್ತಾಡಿ ಖುಷಿಪಟ್ಟಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ರಕ್ಷಿತ್ ಶೆಟ್ಟಿ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇದೀಗ ಮತ್ತೆ ಅವರು ತಮ್ಮ ಕಾಲೇಜು ಕಾರಿಡಾರಿನಲ್ಲಿ ಸುತ್ತಾಡಿ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳೊಂದಿಗೆ ಒಡನಾಡಿದ್ದಲ್ಲದೆ, ಕ್ಯಾಂಟೀನ್ ನಲ್ಲಿ ಊಟ ಸವಿದು ಖುಷಿಪಟ್ಟಿದ್ದಾರೆ. ಈ ವೇಳೆ ಅವರಿಗೆ ಆಂಕರ್ ಅನುಶ್ರೀ ಕೂಡಾ ಸಾಥ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ