ಎಂಗೇಜ್ ಮೆಂಟ್ ಬ್ರೇಕ್ ಅಪ್ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ

ಬುಧವಾರ, 12 ಸೆಪ್ಟಂಬರ್ 2018 (06:41 IST)
ಬೆಂಗಳೂರು : ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಿಂದ ದೂರಸರಿದ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಇದೀಗ ತಮ್ಮ ಎಂಗೇಜ್ ಮೆಂಟ್ ಬ್ರೇಕ್ ಅಪ್ ಆದ ವಿಷಯದ ಕುರಿತಾಗಿ ಮಾಧ್ಯಮದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ತಿಳಿಸಲು ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸಾಗಿದ್ದಾರೆ.


ರಕ್ಷಿತ್ ಶೆಟ್ಟಿ ಮಂಗಳವಾರ ಸಂಜೆ ಮತ್ತೆ ಫೇಸ್ ಬುಕ್ ಗೆ  ವಾಪಸ್ ಬಂದು ಅಭಿಮಾನಿಗಳಿಗೆ ದೀರ್ಘ ಪತ್ರವನ್ನು ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ನೀವು ರಶ್ಮಿಕಾ ಬಗ್ಗೆ ಪೂರ್ವಾಗ್ರಹ ಅಭಿಪ್ರಾಯವನ್ನು ಹೊಂದಿದ್ದೀರಿ. ನಾನು ಯಾವುದೇ ಕಾರಣಕ್ಕೂ ನಿಮ್ಮನ್ನು ದೂಷಿಸುವುದಿಲ್ಲ. ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯ ಮೇಲೆ ದೂಷಣೆ ಮಾಡುವುದನ್ನು ನಿಲ್ಲಿಸಿ.


ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ’’ ಎಂದು ತಿಳಿಸಿದ್ದಾರೆ.


ಆದರೆ ಈ ಪತ್ರದಲ್ಲಿ ಎಲ್ಲೂ ನಿಶ್ಚಿತಾರ್ಥ ಬ್ರೇಕಪ್ ಆಗಿದ್ಯಾ, ಮದುವೆಯಾಗ್ತಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಜನ ಈ ಪತ್ರವನ್ನು ಓದಿ ಇನ್ನೂ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಕಮೆಂಟ್ ಹಾಕೋಕೆ ಶುರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ