ಚಾರ್ಲಿ 777 ಬಿಡುಗಡೆ ದಿನಾಂಕ ಘೋಷಿಸಿದ ರಕ್ಷಿತ್ ಶೆಟ್ಟಿ

ಶುಕ್ರವಾರ, 29 ಅಕ್ಟೋಬರ್ 2021 (08:45 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ.

ಡಿಸೆಂಬರ್ 31 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ಬಿಡುಗಡೆಯಾಗುತ್ತಿರುವ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಇದಾಗಿದೆ.

ಈ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ‘ಟಾರ್ಚರ್’ ಹಾಡು ಭಾರೀ ಹಿಟ್ ಆಗಿದೆ. ಚಿತ್ರದಲ್ಲಿ ಎಂಟರ್ ಟೈನ್ ಮೆಂಟ್ ಗೆ ಕೊರತೆಯಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ