ಸಹೋದರ ರಾಣಾ ಬರ್ತ್ ಡೇಗೆ ರಕ್ಷಿತಾ ಪ್ರೇಮ್ ಕೊಟ್ಟ ಬೆಸ್ಟ್ ಗಿಫ್ಟ್ ಏನು ಗೊತ್ತಾ?

ಮಂಗಳವಾರ, 15 ಅಕ್ಟೋಬರ್ 2019 (10:24 IST)
ಬೆಂಗಳೂರು: ರಕ್ಷಿತಾ ಪ್ರೇಮ್ ತಮ್ಮ ಸಹೋದರ ರಾಣಾ ಅಲಿಯಾಸ್ ಅಭಿಗಾಗಿ ಏಕ್ ಲವ್ ಯಾ ಎನ್ನುವ ಸಿನಿಮಾ ನಿರ್ಮಿಸುತ್ತಿರುವುದು ಗೊತ್ತೇ ಇದೆ.


ಇಂದು ರಾಣಾ ಜನ್ಮದಿನವಾಗಿದ್ದು, ಸಹೋದರನ  ಬರ್ತ್ ಡೇಗೆ ರಕ್ಷಿತಾ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದಾರೆ. ರಾಣಾಗೆ ಏಕ್ ಲವ್ ಯಾ ಸಿನಿಮಾ ಮೊದಲ ಸಿನಿಮಾವಾಗಿದೆ. ಇದಕ್ಕೆ ಬಾವ ಜೋಗಿ ಪ್ರೇಮ್ ನಿರ್ದೇಶನ ಎಂದರೆ ಕೇಳಬೇಕೇ? ಸಹಜವಾಗಿಯೇ ಹೈಪ್ ಇದ್ದೇ ಇರುತ್ತದೆ.

ಈಗಾಗಲೇ ಫಸ್ಟ್ ಲುಕ್ ನಿಂದ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾದ ಮತ್ತೊಂದು ಲುಕ್ ನ್ನು ರಕ್ಷಿತಾ ಸಹೋದರನಿಗೆ ಬರ್ತ್ ಡೇಗೆ ಗಿಫ್ಟ್ ಆಗಿ ಹೊರಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುವುದಾಗಿಯೂ ಪ್ರಕಟಿಸಿದ್ದಾರೆ. ಮೊದಲ ಸಿನಿಮಾ ಮಾಡುತ್ತಿರುವ ರಾಣಾಗೆ ಇದಕ್ಕಿಂತ ದೊಡ್ಡ ಗಿಫ್ಟ್ ಬೇಕೇ?!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ