ದರ್ಶನ್ ಜತೆಗೆ ಸಿನಿಮಾ ಯಾವಾಗ ಎಂದ ಅಭಿಮಾನಿಗೆ ರಕ್ಷಿತಾ ಹೇಳಿದ್ದೇನು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಏಕ್ ಲವ್ ಯಾ ಟೀಸರ್ ಬಗ್ಗೆ ಬರೆದುಕೊಂಡ ರಕ್ಷಿತಾಗೆ ಅಭಿಮಾನಿಯೊಬ್ಬರು ದರ್ಶನ್ ಜತೆ ಸಿನಿಮಾ ಯಾವಾಗ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತಾ ದರ್ಶನ್ ಮತ್ತು ಪ್ರೇಮ್ ಗೆ ಡೇಟ್ ಮತ್ತು ಟೈಮ್ ಸಿಕ್ಕಾಗ ಅವರಿಬ್ಬರೂ ಜತೆಯಾಗಿ ಕೆಲಸ ಮಾಡಿದಾಗ ಎಂದು ಪ್ರತಿಕ್ರಿಯಿಸಿದ್ದಾರೆ.