ಅಂಥಹವರ ಜೊತೆ ಕೂರುವುದೂ ತಪ್ಪು: ಜಗ್ಗೇಶ್ ಗೇ ಟಾಂಗ್ ಕೊಟ್ಟರಾ ನಟಿ ರಕ್ಷಿತಾ

Krishnaveni K

ಗುರುವಾರ, 7 ನವೆಂಬರ್ 2024 (14:40 IST)
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬಳಿಕ ಅವರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಕ್ಕೆ ನಟ ಜಗ್ಗೇಶ್ ತೀವ್ರ ಟೀಕೆಗೊಳಗಾಗಿದ್ದರು. ಇದೀಗ ಜಗ್ಗೇಶ್ ಗೆ ಆತ್ಮೀಯರಾಗಿದ್ದ ನಟಿ ರಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಸಂದೇಶವೊಂದು ಎಲ್ಲರೂ ಹುಬ್ಬೇರುವಂತೆ ಮಾಡುತ್ತಿದೆ.

ಗುರು ಪ್ರಸಾದ್ ಸಾವಿನ ಬಳಿಕ ಅವರು ಅಹಂಕಾರಿ, ದೇವರಿಗೇ ಬಯ್ಯುತ್ತಿದ್ದರು, ಸೋರಿಯಾಸಿಸ್ ಖಾಯಿಲೆಯಿದ್ದರೂ ನಮ್ಮ ತಟ್ಟೆಗೇ ನೇರವಾಗಿ ಕೈ ಹಾಕುತ್ತಿದ್ದರು ಎಂದೆಲ್ಲಾ ಜಗ್ಗೇಶ್ ಮಾತನಾಡಿದ್ದರು. ಅವರ ಮಾತಿಗೆ ಎಷ್ಟೋ ಜನ ಟಿಕೆ ಮಾಡಿದ್ದಾರೆ. ಒಬ್ಬ ವ್ಯಕ್ತಿ ಸತ್ತ ಬಳಿಕ ಆತನ ಬಗ್ಗೆ ಕಾಮೆಂಟ್ ಮಾಡುವುದು ತಪ್ಪು ಎಂದು ಟೀಕಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಗ್ಗೇಶ್, ‘ಗುರುಪ್ರಸಾದ್ ಎಂದರೆ ರಕ್ಷಿತಾ ಪ್ರೇಮ್ ಗೆ ಭಯವಿತ್ತು. ಅವರನ್ನು ಶೋಗೆ ಕರೆಸೋಣವೆಂದು ಹೇಳಿದರೆ ಬೇಕಿದ್ರೆ ನೀವೇ ಇರಿ, ನಾನಂತೂ ಇಲ್ಲಿ ಇರಲ್ಲ ಎಂದು ಎದ್ದು ಹೋಗಿಬಿಡುತ್ತಿದ್ದರು’ ಎಂದು ಜಗ್ಗೇಶ್ ಹೇಳಿಕೆ ನೀಡಿದ್ದರು.

ಇದೀಗ ರಕ್ಷಿತಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ‘ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ಜೊತೆ ನಾವು ಟೇಬಲ್ ಮುಂದೆ ಕೂರುವುದೂ ತಪ್ಪು. ಯಾಕೆಂದರೆ ನಾಳೆ ನೀವು ಅಲ್ಲಿಂದ ಎದ್ದು ಹೋದ ಮೇಲೆ ನಿಮ್ಮ ಬಗ್ಗೆಯೂ ಕೆಟ್ಟದಾಗಿ ಕಾಮೆಂಟ್ ಮಾಡಬಹುದು’ ಎಂದು ಸಾಲೊಂದನ್ನು ಬರೆದುಕೊಂಡಿದ್ದಾರೆ. ಇದನ್ನು ನೋಡಿದರೆ ಇದು ಜಗ್ಗೇಶ್ ಅವರನ್ನು ಉದ್ದೇಶಿಸಿಯೇ ಮಾಡಿರುವ ಕಾಮೆಂಟ್ ಇರಬಹುದೇ ಎಂಬ ಅನುಮಾನ ಮೂಡಿಸುವಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ