BBK12: ಒಂದೇ ದಿನದಲ್ಲಿ ಎಲಿಮಿನೇಟ್ ಮಾಡುದಿದ್ರೆ ರಕ್ಷಿತಾಳನ್ನು ಎಂಥ ಸಾವಿಗೆ ಕರೆಸಿದ್ದಾ

Krishnaveni K

ಮಂಗಳವಾರ, 30 ಸೆಪ್ಟಂಬರ್ 2025 (10:45 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಸಿಸಿದ್ದ ರಕ್ಷಿತಾ ಒಂದೇ ದಿನದಲ್ಲಿ ಎಲಿಮಿನೇಟ್ ಆಗಿ ಹೋಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ದಿನದಲ್ಲಿ ಎಲಿಮಿನೇಟ್ ಮಾಡುತ್ತಿದ್ದರೆ ಎಂಥ ಸಾವಿಗೆ ಕರೆಸಿದ್ದಾ ಎಂದು ಜನ ಹಿಡಿ ಶಾಪ ಹಾಕಿದ್ದಾರೆ.

ಮುಂಬೈ ನಿವಾಸಿ, ಕರಾವಳಿಯ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯೊಳಗೆ ಹೋದ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆಗಿ ಹೋಗಿದ್ದಾರೆ. ಇದಕ್ಕೆ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಕ್ಷಿತಾಗೆ ಕನ್ನಡ ಸರಿಯಾಗಿ ಬರಲ್ಲ ಎನ್ನುವುದು ಬಿಟ್ಟರೆ ಆಕೆ ಒಳ್ಳೆ ಮನರಂಜನೆ ಕೊಡ್ತಿದ್ದಳು. ಆದರೆ ಆಕೆಯನ್ನು ಒಂದೇ ದಿನದಲ್ಲಿ ಮನೆಯಿಂದ ಹೊರಗೆ ಹಾಕಿದ್ದು ಸರಿಯಲ್ಲ. ಸ್ಪರ್ಧಿ ಹೇಗೆ ಎಂದು ತಿಳಿಯಲು ಒಂದು ದಿನವಾದರೂ ಅವಕಾಶ ಕೊಡಬೇಕಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬಾರಿ ಆರಂಭದಲ್ಲೇ ಬಿಗ್ ಬಾಸ್ ಟ್ವಿಸ್ಟ್ ಇರುತ್ತದೆ ಎಂದು ಸುಳಿವು ಕೊಟ್ಟಿದ್ದರು. ಇಷ್ಟು ಸೀಸನ್ ಗಳಲ್ಲಿ ಇಲ್ಲದ ಟ್ವಿಸ್ಟ್ ಇದೇ ಇರಬೇಕು ಎನಿಸುತ್ತದೆ. ಮೊದಲ ದಿನವೇ ಎಲಿಮಿನೇಷನ್ ಇಷ್ಟು ದಿನ ಇರಲಿಲ್ಲ. ಆದರೆ ಈ ಬಾರಿ ಶೋ ವ್ಯತ್ಯಸ್ಥವಾಗಿರುತ್ತದೆ ಎಂದು ಬಿಗ್ ಬಾಸ್ ಸುಳಿವು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ