ಭಯ ಹುಟ್ಟಿಸುವ ಸಿನಿಮಾ ಮಾಡುವ ರಾಮ್ ಗೋಪಾಲ್ ವರ್ಮಾಗೇ ಭಯ ಹುಟ್ಟಿಸಿದ ಕಿಚ್ಚ ಸುದೀಪ್, ಅಮಿತಾಭ್ ಬಚ್ಚನ್!

ಮಂಗಳವಾರ, 9 ಏಪ್ರಿಲ್ 2019 (09:41 IST)
ಬೆಂಗಳೂರು: ಇಷ್ಟು ದಿನ ನಿರ್ಮಾಪಕ, ನಿರ್ದೇಶಕರಾಗಿ ತೆರೆ ಹಿಂದೆ ಕೆಲಸ ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಇದೀಗ ನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ.


ಒಬ್ಬ ನಕ್ಸಲೈಟ್ ನ ನೈಜ ಕತೆಯನ್ನು ಆಧರಿಸಿದ ‘ಕೋಬ್ರಾ’ ಎನ್ನುವ ಸಿನಿಮಾವೊಂದನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿದ್ದು ಆ ಸಿನಿಮಾದಲ್ಲಿ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಯೊಬ್ಬರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಮೂಲಕ ರಾಮ್ ಗೋಪಾಲ್ ವರ್ಮಾ ನಟನಾಗುತ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಹೊಸ ಅವತಾರಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಸ್ನೇಹಿತರೂ ಆಗಿರುವ ಕಿಚ್ಚ ಸುದೀಪ್  ಶುಭ ಹಾರೈಸಿದ್ದಾರೆ.  ನಿಮ್ಮೆಲ್ಲರ ವಿಶ್, ನಿರೀಕ್ಷೆ ನೋಡಿದರೆ ನನಗೆ ಭಯವಾಗುತ್ತಿದೆ ಎಂದು ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ