ಯುಗಾದಿಗೆ ಕಿಚ್ಚ ಸುದೀಪ್ ಪತ್ನಿ ಕೊಡಲಿರುವ ಆ ಸರ್ಪ್ರೈಸ್ ಏನು?

ಗುರುವಾರ, 4 ಏಪ್ರಿಲ್ 2019 (10:27 IST)
ಬೆಂಗಳೂರು: ಇದೇ ಶನಿವಾರ ಬರಲಿರುವ ಯುಗಾದಿ ಹಬ್ಬಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅಚ್ಚರಿಯ ಉಡುಗೊರೆಯೊಂದು ಕಾದಿದೆಯಂತೆ. ಹಾಗಂತ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.


ಪ್ರಿಯಾ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಯುಗಾದಿ ದಿನ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ. ಕಾದು ನೋಡಿ ಎಂದು ಬರೆದುಕೊಂಡಿದ್ದಾರೆ.

ಪ್ರಿಯಾ ಹೀಗೆ ಬರೆದಿದ್ದಕ್ಕೆ ಕಿಚ್ಚ ಕೂಡಾ ನಗುತ್ತಿರುವ ಸ್ಮೈಲೀ ಚಿಹ್ನೆಯ ಮೂಲಕ ಪ್ರತಿಕ್ರಿಯಿಸಿ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿಗೆ ಹಾಗಿದ್ದರೆ ಸುದೀಪ್ ಅಭಿನಯಿಸುತ್ತಿರುವ ಯಾವುದಾದರೂ ಸಿನಿಮಾ ಫಸ್ಟ್ ಲುಕ್, ಟ್ರೈಲರ್ ಏನಾದರೂ ರಿಲೀಸ್ ಆಗುತ್ತಾ ಅಥವಾ ಬೇರೆ ಏನಾದರೂ ವಿಚಾರ ಹೇಳಲಿದ್ದಾರಾ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ನಿಜ ಗೊತ್ತಾಗಬೇಕಾದರೆ ಯುಗಾದಿ ದಿನವರೆಗೆ ಕಾಯಲೇ ಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ