ಧೋನಿ ಚಿತ್ರದಲ್ಲಿ ರಾಮ್ ಚರಣ್ ನಟನೆ ?

ಸೋಮವಾರ, 22 ಡಿಸೆಂಬರ್ 2014 (09:35 IST)
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಕ್ಯಾಪ್ಟನ್ ಅನ್ನುವುದು ಎಲ್ಲರಿಗು ಗೊತ್ತು. ಆ ಕ್ರೀಡಾಪಟು  ತಮ್ಮ ಸಾಧನೆಯಿಂದ ವಿಶ್ವಮಾನ್ಯರಾಗಿದ್ದಾರೆ ಎನ್ನುವ ಸಂಗತಿಯು ಸಹಿತ ನಿಮಗೆ  ಗೊತ್ತೇ ಇದೆ. ಅದೇರೀತಿ, ಆತನ ಬದುಕಿನ ಬಗ್ಗೆ ಸಿನಿಮಾ  ನಿರ್ಮಿಸುತ್ತಿದ್ದಾರೆ, ಅದರ ಹೀರೋ ಸುಶಾಂತ್ ಸಿಂಗ್  ರಾಜ್ ಪೂತ್ . ಅದರ ಹೆಸರು ಎಂ ಎಸ್ ಧೋನಿ. ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಇವಿಷ್ಟು ಸಂಗತಿ ನಿಮಗೆ ಗೊತ್ತೇ ಇದೆ.
ಆದರೆ ತೆಲುಗು ಸ್ಟಾರ್ ಹೀರೋ  ರಾಮ್ ಚರಣ್ ತೇಜ ಈ  ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇದು ಈಗ ಇರುವ ಹೊಸಸುದ್ದಿ ಆಗಿದೆ. ಜಂಜೀರ್ ಮುಖಾಂತರ ಬಾಲಿವುಡ್ ಗೆ ಎಂಟ್ರಿ ಆದ ರಾಮ್ ಚರಣ್ ಗೆ ಆ ಚಿತ್ರ ಸೋಲಿನ ರುಚಿ ನೀಡಿತ್ತು. ಅದಾದ ಬಳಿಕ ಅವರು ಹಿಂದಿಯತ್ತ ಕಣ್ಣೆತ್ತಿ ನೋಡಲು ಹೋಗಿರಲಿಲ್ಲ. ಆದರು ಈಗ ರಾಮ್ ಅವರಿಗೆ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. 
 
ಈ ಮೊದಲು ಅದರ ಬಗ್ಗೆ ರಾಮ್ ಸುಳುಹು ನೀಡಿದ್ದರು, ಅದೀಗಸುದ್ದಿಯಾಗಿ ಹೊರಬಂದಿದೆ. ಇನ್ನು ಪ್ರಾರಂಭವಾಗದ ಈ ಚಿತ್ರದಲ್ಲಿ ತಾರಾಗಣದ ಆಯ್ಕೆ ಆಗುತ್ತಿದೆ ಹಾಗಂತ  ಹೇಳಿದ್ದಾರೆ ನಿರ್ದೇಶಕ ನೀರಜ್ ಪಾಂಡೆ. ಧೋನಿ ಪತ್ನಿ ಸಾಕ್ಷಿ ಸಿಂಗ್ ಪಾತ್ರಧಾರಿ ಆಗಿರೋದು ಆಲಿಯಾ ಭಟ್.

ವೆಬ್ದುನಿಯಾವನ್ನು ಓದಿ