ರಮೇಶ್ ಅರವಿಂದ್‌ಗೆ ’ಕ್ವೀನ್’ ಆಗೋರು ಯಾರು?

ಮಂಗಳವಾರ, 13 ಡಿಸೆಂಬರ್ 2016 (13:01 IST)
ಸ್ಯಾಂಡಲ್‌ವುಡ್ ನಲ್ಲಿ ತ್ಯಾಗರಾಜ್ ಎಂದು ಕರೆಸಿಕೊಂಡಿರುವ ರಮೇಶ್ ಅರವಿಂದ ಈಗ 100 ಚಿತ್ರಗಳನ್ನು ಪೂರೈಸಿದ್ದಾರೆ. ಇದೀಗ ಅವರ ನಿರ್ದೇಶನದಲ್ಲಿ ಸುಂದರಾಂಗ ಜಾಣ ಚಿತ್ರ ಬರುತ್ತಿದೆ. ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 
 
ಹಿಂದಿಯ ಕ್ವೀನ್ ಚಿತ್ರವನ್ನು ರೀಮೇಕ್ ಮಾಡಲು ಮುಂದಾಗಿದ್ದಾರೆ. ಈ ಪಾತ್ರಕ್ಕೆ ಯಾರು ಅರ್ಹರು ಎಂದು ಹುಡುಕಾಡಿದಾಗ ಚಿತ್ರತಂಡದ ಕಣ್ಣಿಗೆ ಬಿದ್ದಿದ್ದು ಪ್ಯಾರ್ ಗೆ ಆಗ್ಬಿಟ್ಟೈತೆ ಬೆಡಗಿ ಪಾರುಲ್ ಯಾದವ್. ಹೌದು ಅವರೇ ಕನ್ನಡದ ಕ್ವೀನ್ ಆಗಲಿರುವ ತಾರೆ. ಈ ವರ್ಷ ಪಾರುಲ್ ಕಿಲ್ಲಿಂಗ್ ವೀರಪ್ಪನ್, ಜೆಸ್ಸಿ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. 
 
ಇನ್ನು ಕ್ವೀನ್ ಚಿತ್ರದ ವಿಚಾರಕ್ಕೆ ಬರುವುದಾದರೆ, ಇದು ಕಂಗನಾ ರನಾವತ್ ಗೆ ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸಿನಿಮಾ. ಕಮರ್ಷಿಯಲ್ ಆಗಿಯೂ ಗೆದ್ದಂತ ಸಿನಿಮಾ. ಇದೇ ಚಿತ್ರ ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ. ಅಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ