ಮನೆ ಬಾಡಿಗೆ ವಿಚಾರಕ್ಕೆ ‘ನಾನಿ’ ಚಿತ್ರದ ನಿರ್ಮಾಪಕ ರಮೇಶ್ ಜೈನ್ ಕೊಲೆ

ಶನಿವಾರ, 1 ಡಿಸೆಂಬರ್ 2018 (08:48 IST)
ಬೆಂಗಳೂರು : ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಸ್ಯಾಂಡಲ್ ವುಡ್ ನ ನಾನಿ ಚಿತ್ರದ ನಿರ್ಮಾಪಕ ರಮೇಶ್ ಜೈನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ರಮೇಶ್ ಜೈನ್ ಅವರ ಬ್ಯಾಟರಾಯನಪುರದ ಕವಿತಾ ಲೇಔಟ್ ನಲ್ಲಿರುವ ಮನೆಯೊಂದರಲ್ಲಿ ಬಾಡಿಗೆಯಿದ್ದ ನಸೀರ್ ಹಾಗೂ ಪಾಷ ಎಂಬುವವರು ಕಳೆದ 7 ವರ್ಷಗಳಿಂದ ಬಾಡಿಗೆಯನ್ನೇ ಕೊಡುತ್ತಿರಲಿಲ್ಲ. ಈ ವಿಚಾರವಾಗಿ ತಮ್ಮ ಮನೆಯ ಬಾಡಿಗೆ ಹಣವನ್ನು ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ರಮೇಶ್ ಹೋಗಿದಾಗ ಅಲ್ಲಿ ಅವರ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ  ನಸೀರ್ ಹಾಗೂ ಪಾಷ  ನಿರ್ಮಾಪಕ ರಮೇಶ್ ಜೈನ್ ಅವರನ್ನು ಕೊಲೆ ಮಾಡಿ ಕೋಳಿ ತ್ಯಾಜದ ಮೂಟೆಯಲ್ಲಿ ಶವ ಸಾಗಿಸಿ ಕೆಂಗೇರಿ ಮೋರಿಯಲ್ಲಿ ಎಸೆದು ಬಂದಿದ್ದಾರೆ.


ಸದ್ಯ ಘಟನೆ ಸಂಬಂಧ ಪ್ರಮುಖ ಆರೋಪಿ ಇಸ್ಲಾಂ ಪಾಷ ಸೇರಿ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ