ವೀಕೆಂಡ್ ವಿತ್ ರಮೇಶ್ ಶೋನ ಮೊದಲ ಸಾಧಕಿ ನಟಿ ರಮ್ಯಾ!

ಮಂಗಳವಾರ, 21 ಮಾರ್ಚ್ 2023 (09:10 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ರಮೇಶ್ ಅರವಿಂದ್ ನಡೆಸಿಕೊಡಲಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಯಾರೆಂದು ಈಗಾಗಲೇ ಬಹಿರಂಗವಾಗಿದೆ.

ನಿನ್ನೆ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಈ ಸೀಸನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಈ ಅವೃತ್ತಿಯ ಮೊದಲ ಅತಿಥಿ ನಟಿ ರಮ್ಯಾ ಎಂದು ಖಚಿತಪಡಿಸಿದ್ದಾರೆ.

ಈ ಸೀಸನ್ ನಲ್ಲಿ ಸಿನಿಮಾ ರಂಗದಿಂದ ನಟ ಧ್ರುವ ಸರ್ಜಾ, ನಟಿ ಮಾಲಾಶ್ರೀ, ರಚಿತಾ ರಾಂ, ಹೃದ್ರೋಗ ತಜ್ಞ ಡಾ. ಮಂಜುನಾಥ್ ಸಾಧಕರಾಗಿ ಕಾಣಿಸಿಕೊಳ್ಳಲಿದ್ದಾರೆ. ನೂರನೇ ಎಪಿಸೋಡ್ ಗೆ ವಿಶೇಷ ಅತಿಥಿಯೊಬ್ಬರು ಆಗಮಿಸಲಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ