ಮತ್ತೆ ಶುರುವಾಗ್ತಿದೆ ವೀಕೆಂಡ್ ವಿತ್ ರಮೇಶ್: ಈ ಬಾರಿ ಯಾರೆಲ್ಲಾ ಅತಿಥಿಗಳು?

ಸೋಮವಾರ, 6 ಫೆಬ್ರವರಿ 2023 (08:30 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಲ್ಲರಿಗೂ ಅಚ್ಚುಮೆಚ್ಚು. ಬಹಳ ಕಾಲದ ನಂತರ ಈ ಕಾರ್ಯಕ್ರಮ ಮತ್ತೆ ಶುರುವಾಗುತ್ತಿದೆ.

ಈಗಾಗಲೇ ವಾಹಿನಿ ಹೊಸ ಸೀಸನ್ ಆರಂಭಿಸುತ್ತಿರುವುದರ ಬಗ್ಗೆ ಪ್ರೋಮೋ ಹರಿಯಬಿಟ್ಟಿದೆ. ಇದು ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಆಗಿರಲಿದೆ.

ಇದುವರೆಗೆ ಅನೇಕ ಘಟಾನುಘಟಿಗಳು ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನ ಕತೆಯನ್ನು ಹೇಳಿದ್ದರು. ಈ ಬಾರಿಯೂ ಮತ್ತಷ್ಟು ಸಾಧಕರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಈ ಪೈಕಿ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಮುಂತಾದವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ