ತುಂಬು ಗರ್ಭಿಣಿ ಅಮೂಲ್ಯಗೆ ನಟಿ ರಮ್ಯಾ ದುಬಾರಿ ಗಿಫ್ಟ್

ಬುಧವಾರ, 16 ಫೆಬ್ರವರಿ 2022 (08:40 IST)
ಬೆಂಗಳೂರು: ಚಿತ್ರರಂಗದಲ್ಲಿ ಸಕ್ರಿಯರಾಗಿರದೇ ಇದ್ದರೂ ನಟಿ ರಮ್ಯಾ ಈಗಲೂ ಚಿತ್ರರಂಗದ ಕಲಾವಿದರೊಂದಿಗೆ ಸಂಪರ್ಕದಲ್ಲಿದ್ದಾರೆ.

ಹೊಸ ಹೊಸ ಸಿನಿಮಾಗಳ ರಿಲೀಸ್ ಗೆ ಶುಭ ಹಾರೈಸುವುದು, ಬರ್ತ್ ಡೇ ಶುಭಾಶಯಗಳ ಮೂಲಕ ರಮ್ಯಾ ತಾವಿನ್ನೂ ಚಿತ್ರರಂಗದವರೊಂದಿಗೆ ಸಂಪರ್ಕದಲ್ಲಿರುವುದಾಗಿ ಸಾರುತ್ತಲೇ ಇರುತ್ತಾರೆ.

ಇದೀಗ ತುಂಬು ಗರ್ಭಿಣಿ, ನಟಿ ಅಮೂಲ್ಯ ಬೇಬಿ ಶೊವರ್ ಪಾರ್ಟಿಗೆ ಬಂದ ರಮ್ಯಾ ದುಬಾರಿ ಬೆಲೆಯ ಕನಕವಲ್ಲಿ ಸೀರೆ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸಿದ್ದಾರೆ. ಮೊನ್ನೆಯಷ್ಟೇ ಅಮೂಲ್ಯ ಮತ್ತು ಪತಿ ಜಗದೀಶ್ ಚಿತ್ರರಂಗದ ಸ್ನೇಹಿತರಿಗಾಗಿ ಪಂಚತಾರಾ ಹೋಟೆಲ್ ನಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ಬಂದಿದ್ದ ರಮ್ಯಾ ಸೀರೆ ಗಿಫ್ಟ್ ಕೊಟ್ಟು ಶುಭ ಹಾರೈಸಿದ್ದಾರೆ. ಈ ಕ್ಷಣಗಳನ್ನು ಖುಷಿಯಿಂದ ಹಂಚಿಕೊಂಡಿರುವ ಅಮೂಲ್ಯ ರಮ್ಯಾಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ