ತವರಿಗೆ ವಾಪಸ್ ಆದ ಮೋಹಕ ತಾರೆ ರಮ್ಯಾ

ಶುಕ್ರವಾರ, 3 ಜುಲೈ 2015 (10:13 IST)
ಸಿನಿಮಾಗೆ ಟಾಟಾ ಹೇಳಿ ರಾಜಕೀಯ ಸೇರಿದ್ದ ರಮ್ಯಾ ಬಳಿಕ ರಾಜಕೀಯದಿಂದಲೂ ದೂರ ಉಳಿದು ನಾಪತ್ತೆಯಾಗಿದ್ದರು. ಆದರೆ ರಮ್ಯಾ ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ , ಹೇಗಿದ್ದಾರೆ ಎಂಬ ಪ್ರಶ್ನೆಗಳು ರಮ್ಯಾ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಅಲ್ಲದೇ ರಮ್ಯಾ ಲಂಡನ್ ಗೆ ಹೋಗಿ ಅಲ್ಲೇ ಸೆಟ್ಲಾಗಿದ್ದಾರೆ ಎಂಬ ಮಾತುಗಳು ಚಂದನವನದ ಅಂಗಳದಲ್ಲಿ ಸುದ್ದಿಯಾಗಿತ್ತು. ಆದ್ರೀಗ, ಸ್ಯಾಂಡಲ್ ವುಡ್ ಗೌರಮ್ಮ  ವಾಪಸ್ಸಾಗಿದ್ದಾರೆ. ಮೊನ್ನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಮ್ಯಾ ಮೇಡಮ್ ಪ್ರತ್ಯಕ್ಷ ಆಗಿದ್ದಾರೆ.
ಹೌದು, ಬೆಂಗಳೂರಿನ ಟ್ರಿನಿಟಿ ರೋಡ್ ನಲ್ಲಿರುವ ಒನ್ ಮಾಲ್ ಗೆ ರಮ್ಯಾ ಮೊನ್ನೆ ಭೇಟಿ ನೀಡಿದ್ದಾರೆ. ಅಲ್ಲದೇ ಅಭಿಮಾನಿಯೊಬ್ಬರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಅಂದ್ಹಾಗೆ ರಮ್ಯಾ ಒನ್ ಮಾಲ್ ನಲ್ಲಿ ಸುಮಾರು ಗಂಟೆಗಳ ಕಾಲ ಶಾಪಿಂಗ್ ಮಾಡಿದ್ದಾರೆ. ಅದರಲ್ಲಿ ದಿನಿಸಿ ಐಟಂಗಳನ್ನೇ ರಮ್ಯಾ ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಇನ್ನು ಫೋಟೋದಲ್ಲಿ ಚಂದನವನದ ಚೆಂದುಳ್ಳಿ ತುಸು ದಪ್ಪವಾಗಿರುವಂತೆ ಕಾಣುತ್ತಿದ್ದಾರೆ. 
 
ಇನ್ನು ಮಾಲ್ ನಲ್ಲಿ ರಮ್ಯಾ ಖರೀದಿಸಿರುವ ಐಟಂಗಳನ್ನು ನೋಡಿದ್ರೆ ಆಕೆ ಮತ್ತೆ ಸ್ಯಾಂಡಲ್ ವುಡ್ ಗೆ ಬರೋಕೆ ಪ್ಲಾನ್ ಮಾಡುತ್ತಿದ್ದಾರೆ ಅನ್ನೋ ಸುಳಿವು ಸಿಗುತ್ತಿದೆ. ಯಾಕಂದ್ರೆ ರಮ್ಯಾ ಡ್ರೈ ಫ್ರುಟ್ಸ್, ಓಟ್ಸ್ ಹೀಗೆ ಸಣ್ಣಗಾಗಲು ಬೇಕಾಗಿರುವ ಐಟಂಗಳನ್ನೇ ರಮ್ಯಾ ಖರೀದಿಸಿದ್ದಾರೆ. ಹಾಗಾಗಿ ರಮ್ಯಾ ಚಂದನವನಕ್ಕೆ ವಾಪಸ್ಸಾಗುವುದು ಪಕ್ಕಾ ಅಂತಿದ್ದಾರೆ ಪದ್ಮಾವತಿ ಅಭಿಮಾನಿಗಳು. ಇನ್ನು ಕೆಲ ಮೂಲಗಳ ಪ್ರಕಾರ ಬೆಂಗಳೂರಿಗೆ ಬಂದು ಕೆಲ ದಿನಗಳೇ ಆಯಿತಂತೆ. ಆದ್ರೆ ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಟೀಚರ್ ಅಮ್ಮಾನೇ ನೀಡಬೇಕು.

ವೆಬ್ದುನಿಯಾವನ್ನು ಓದಿ