ಏಪ್ರಿಲ್ ತಿಂಗಳಲ್ಲಿ ರಮ್ಯಾ ಘರ್ ವಾಪಸಿ...?!

ಗುರುವಾರ, 5 ಮಾರ್ಚ್ 2015 (10:10 IST)
ಸ್ಯಾಂಡಲ್ ವುಡ್ ಗಿಣಿಮರಿ ರಮ್ಯ ಹಾರಿ ಹೋದಾಗ ಆಕೆಯ ಅಭಿಮಾನಿಗಳು, ವಿರೋಧಾಭಿಮಾನಿಗಳು ಗೊಳೋ ಎಂದು ಕಣ್ಣೀರು ಸುರಿಸಿದ್ದರು. ಎಲ್ಲಿ ನನ್ನ ಗಿಣಿಮರಿಯು ಎಂದು ಹಾಡುತ್ತಾ ತಮ್ಮ ದುಃಖ ವ್ಯಕ್ತ ಪಡಿಸಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಆಕೆ ತನ್ನ ವಾಸಸ್ಥಾನ ವಿದೇಶಕ್ಕೆ ಬದಲಾಯಿಸಿಕೊಂಡಿದ್ದಳು.ಆದರೆ ವಿದೇಶದಲ್ಲಿ ಆಕೆ ಏನ್ ಮಾಡ್ತಾ ಇದ್ದಾಳೆ ಯಾರೊಂದಿಗೆ ಇದ್ದಾಳೆ ಎನ್ನುವ ಸಂಗತಿಗಳು ತಿಳಿಯದೆ ಒದ್ದಾಡಿದ್ದರು. ಈಗ ಬಂದಿರುವ ಸುದ್ದಿ ಪ್ರಕಾರ ರಮ್ಯಾ ಎಪ್ರಿಲ್ ತಿಂಗಳಲ್ಲಿ ಹಿಂತಿರುಗುತ್ತಿದ್ದಾಳೆ. ಆಕೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಇರುವಿಕೆ ತೋರಲು ಆರಂಭ ಮಾಡಿದ್ದಳು. ಅದರಲ್ಲಿ ಆಕೆ ತಾನು ಸದ್ಯದಲ್ಲೇ  ಬೆಂಗಳೂರಿಗೆ ಬರುವುದಾಗಿ ಹೇಳಿದ್ದಳು. ಆಕೆ ಆಗ ಎಪ್ರಿಲ್‌ನಲ್ಲಿ ಭಾರತಕ್ಕೆ ಹಿಂತಿರುವುದಾಗಿ ಹೇಳಿದ್ದಳು. 
ಪ್ರಸ್ತುತ ಈ ನಟಿ ಲಂಡನ್ ನಲ್ಲಿ ಇದ್ದಾಳೆ. ಮತ್ತೊಂದು ಸುದ್ದಿ ಪ್ರಕಾರ ಕಾಂಗ್ರೆಸ್ ಐ ರಾಜ್ಯಕ್ಕೆ ಚಕ್ರವರ್ತಿಯಾಗಲು  ಸಿದ್ಧತೆ ನಡೆಸಿದ್ದಾರೆ ರಾಹುಲ್ ಗಾಂಧಿ. ಅವರ ಪಟ್ಟಾಭಿಷೇಕ ಎಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಆ ಕಾರಣದಿಂದ ಈ ಚೆಲುವೆ  ವಾಪಸ್   ಬರುತ್ತಿದ್ದಾಳ ?

ವೆಬ್ದುನಿಯಾವನ್ನು ಓದಿ