ಅಮ್ಮನ ಪಾತ್ರಗಳತ್ತ ಮುಖಮಾಡಿದ ಮಾಜಿ ಮಾದಕ ತಾರೆ ರಮ್ಯಕೃಷ್ಣ...?!

ಶನಿವಾರ, 28 ಫೆಬ್ರವರಿ 2015 (10:18 IST)
ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ವುಡ್‌ಗಳಲ್ಲೂ ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ ಮಾದಕ ತಾರೆ ರಮ್ಯಾ ಕೃಷ್ಣ. 1990ರ ದಶಕದ ಪಡ್ಡೆ ಹೈಕಳುಗಳ ನಿದ್ದೆ ಕೆಡಿಸಿದ ಸೆಕ್ಸಿ ಚೆಲುವೆ ರಮ್ಯಾ ಕೃಷ್ಣ. ತನ್ನ ರಾಶಿ ರಾಶಿ ರೂಪದಿಂದ ನಿದ್ದೆ  ಕೆಡಿಸಿದ್ದ ಆಕೆ ಮದುವೆ, ಮಗು ಎಂದು  ಆದ್ಯತೆ ನೀಡಿ ತನ್ನ ತಾರ ಬದುಕಿನಿಂದ ದೂರ ಉಳಿದಿದ್ದರು. ಈಗ ಆಕೆ ಮತ್ತೆ ಸಿನಿಮಾದಲ್ಲಿ ಎಂಟ್ರಿ ಆಗಿದ್ದಾರೆ. ಅವರಿಗೆ ಈಗಲೂ ಸಹಿತ ಯಶಸ್ಸು ಕಂಡು ಬರುತ್ತಿದೆ. ಎಂದರೆ ಆಕೆ ನಟಿಸಿದ ಚಿತ್ರಗಳು ನಿರ್ಮಾಪಕರ ಜೋಬು ತುಂಬುತ್ತಿದೆ. 
ರೀ ಎಂಟ್ರಿ ಆದಾಗ ಆಕೆಗೆ ತೆಲುಗಿನಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕರೂ ಸಹಿತ ರಮ್ಯ ಗಮನೀಡಿದ್ದು ಮಾತ್ರ ತಮಿಳು ಚಿತ್ರಗಳಲ್ಲಿ. ಆಕೆ ಈಗ ಚಂದ್ರಮೌಳಿ ಅವರ ನಿರ್ದೇಶನ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಆಕೆ ಕೈಲಿ ಆರು  ಚಿತ್ರಗಳಿವೆ. ಕೃಷ್ಣ ವಂಶಿ ಅವರನ್ನು ಮದುವೆ ಆದ ಬಳಿಕ ಆಕೆ ಪಾತ್ರಗಳ ವಿಷಯಕ್ಕೆ ಸಂಬಂಧ ಪಟ್ಟಂತೆಹೆಚ್ಚು ಚೂಸಿ ಆಗಿದ್ದಾರೆ. ಅಂದಂಗೆ ಈಕೆ ಈಗ ನಟಿಸುತ್ತಿರುವ ಪಾತ್ರಗಳು ಅಮ್ಮನ ಪಾತ್ರಗಳಾಗಿವೆ. ತಮಿಳು ಜೊತೆಗೆ ಮಲೆಯಾಳಂ ಭಾಷೆಯಲ್ಲೂ ನಟಿಸುತ್ತಿರುವ ರಮ್ಯ ದಕ್ಷಿಣ ಭಾರತದ ಮಾದಕ ಪೋಷಕ ನಟಿ ಎಂದು ಕರೆಸಿಕೊಳ್ಳುವ ದಿನಗಳು ಸಮೀಪದಲ್ಲೇ ಇದೆ.  

ವೆಬ್ದುನಿಯಾವನ್ನು ಓದಿ