ರಮ್ಯಾ ಬಿಜೆಪಿಗೆ ಸೇರ್ತಾರಾ..? ಇಲ್ಲಿದೆ ತಾಯಿ ರಂಜಿತಾ ಕೊಟ್ಟ ಉತ್ತರ

ಸೋಮವಾರ, 3 ಏಪ್ರಿಲ್ 2017 (16:10 IST)
ನಟಿ ರಮ್ಯಾ ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿ ಸೇರುತ್ತಾರೆಂಬ ಊಹಾಪೋಹಗಳಿಗೆ ರಮ್ಯಾ ತಾಯಿ ರಂಜಿತಾ ತೆರೆ ಎಳೆದಿದ್ದಾರೆ. ರಮ್ಯಾ ಕಾಂಗ್ರೆಸ್`ನಲ್ಲೇ ಇರುತ್ತಾರೆ. ಬೇರಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೃಷ್ಣಮೂರ್ತಿ ಪರ ಪ್ರಚಾರ ಕೈಗೊಂಡ ರಂಜಿತಾ, ರಮ್ಯಾಗೆ ಫುಡ್ ಪಾಯ್ಸನಿಂಗ್ ಆಗಿದ್ದು, ಅದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಪ್ರಚಾರಕ್ಕೆ ರಮ್ಯಾ ಬಂದಿಲ್ಲ. ಬೇರಾವುದೇ ಉದ್ಧೇಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಮ್ಯಾ ತಾಯಿ ರಂಜಿತಾ, ನಿಮಗೆ ಯಾರೋ ಏಪ್ರಿಲ್ ಫೂಲ್ ಮಾಡಿದ್ದಾರೆ. ನಾವು ಈಗಲೂ ಕಾಂಗ್ರೆಸ್`ನಲ್ಲಿದ್ದೇವೆ. ಮುಂದೆಯೂ ಕಾಂಗ್ರೆಸ್`ನಲ್ಲಿರುತ್ತೇವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ