ಸ್ಯಾಂಡಲ್ ವುಡ್ ಹೀರೋಗಳಿಗೆ ನಟಿ ರಮ್ಯಾ ಕಿವಿಮಾತು

ಬುಧವಾರ, 21 ಡಿಸೆಂಬರ್ 2022 (09:36 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ನಟಿ ರಮ್ಯಾ ಧ‍್ವನಿಯೆತ್ತಿದ್ದಾರೆ.

ಸ್ಯಾಂಡಲ್ ವುಡ್ ನಟರು ತಾವು ನಂ.1 ಎಂಬ ಅಹಂ ಬಿಟ್ಟು ಫ್ಯಾನ್ಸ್ ಗಳಿಂದಾಗಿ ಏನೆಲ್ಲಾ ನಡೆಯುತ್ತಿದೆ ಎಂಬ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

ಅಭಿಮಾನಿಗಳಿಗೆ ತಿಳಿ ಹೇಳುವ ಜವಾಬ್ಧಾರಿಯನ್ನು ಸ್ಟಾರ್ ನಟರು ತೆಗೆದುಕೊಳ್ಳಬೇಕು. ಕನ್ನಡ ಚಿತ್ರರಂಗ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಆದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನಮ್ಮದು.  ನಾನು ಯಾವತ್ತಿಗೂ ನಂ.1 ಮತ್ತು ಆ ಸ್ಥಾನ ನನಗೆ ಮಾತ್ರ ದಕ್ಕಬೇಕು ಎನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅವರನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದು ಅಭಿಮಾನಿಗಳು, ಅಭಿಮಾನಿ ಸಂಘಗಳು ತೋರುತ್ತಿರುವ ವರ್ತನೆ ಚಿಂತಾಜನಕವಾಗಿದೆ. ಅಭಿಮಾನಿ ಬಳಗದವರು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ವೃದ್ಧಾಶ್ರಮಕ್ಕೆ ಸಹಾಯ ಮಾಡುವುದು, ಅನ್ನದಾನ, ರಕ್ತದಾನ ಶಿಬಿರ ಇತ್ಯಾದಿ ಸಮಾಜ ಸೇವೆ ಮಾಡುವುದು ಹೆಗ್ಗಳಿಕೆ. ಆದರೆ ಅಭಿಮಾನಿಗಳು ಎನ್ನುವ ಹೆಸರಿನಲ್ಲಿ ಅನಾಮಧೇಯ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟಿ ರೀತಿಯಲ್ಲಿ ಮಾತನಾಡುವುದು ಅತ್ಯಂತ ವಿಷಾಧನೀಯ. ಇಂತಹ ವರ್ತನೆಯನ್ನು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳಿಹೇಳುವ ಜವಾಬ್ಧಾರಿ ನಟರದ್ದು’ ಎಂದು ರಮ್ಯಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ