ದೀಪಿಕಾ, ರಶ್ಮಿಕಾ ಟ್ರೋಲಿಗರ ವಿರುದ್ಧ ನಟಿ ರಮ್ಯಾ ಕಿಡಿ
ಪಠಾಣ್ ಚಿತ್ರದಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ಧರಿಸಿ ಕುಣಿದಾಡಿದ್ದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಪಠಾಣ್ ಬಹಿಷ್ಕಾರಕ್ಕೆ ಕರೆ ಕೊಡಲಾಗುತ್ತಿದೆ.
ಈ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ಸಮಂತಾ ವಿಚ್ಛೇದನ ಕೊಡಲು ಮುಂದಾದರೆಂದು ಅವರನ್ನು ಟ್ರೋಲ್ ಮಾಡಲಾಯಿತು. ಸಾಯಿ ಪಲ್ಲವಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ, ರಶ್ಮಿಕಾ ಬ್ರೇಕಪ್ ವಿಚಾರಕ್ಕೆ, ದೀಪಿಕಾ ಬಟ್ಟೆಯ ಕಾರಣಕ್ಕೆ ಟ್ರೋಲ್ ಆದರು. ಆಯ್ಕೆ ಎನ್ನುವುದು ನಮ್ಮ ಹಕ್ಕು. ಮಹಿಳೆಯರು ದೇವಿ ದುರ್ಗೆಯ ಮತ್ತೊಂದು ರೂಪ. ಸ್ತ್ರೀ ಧ್ವೇಷ ಎನ್ನುವುದು ಅತ್ಯಂತ ಕೆಟ್ಟದ್ದಾಗಿದ್ದು, ಅದರ ವಿರುದ್ಧ ನಾವು ಹೋರಾಡಬೇಕಿದೆ ಎಂದಿದ್ದಾರೆ.