ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ನಡುವಿನ ಹಳೆ ಗಲಾಟೆ ಕೇಸ್ ಮತ್ತೆ ರೀ ಓಪನ್ ಆಗಿದೆ. ಪಾನಿಪುರಿ ಕಿಟ್ಟಿ ಮೇಲೆ ಹೊಸದಾಗಿ ಹೈಗ್ರೌಂಡ್ ಠಾಣೆಯಲ್ಲಿ FIR ದಾಖಲಾಗಿದ್ದು, ವಿಜಿ ಕೋರ್ಟ್ ಮುಖಾಂತರ ಕೇಸ್ ರೀ ಓಪನ್ ಮಾಡಿಸಿದ್ದಾರೆ.2018 ರಲ್ಲಿ ಪಾನಿಪುರಿ ಕಿಟ್ಟಿ ಮತ್ತು ದುನಿಯಾ ವಿಜಿ ಕಾರ್ಯಕ್ರಮವೊಂದರಲ್ಲಿ ಕೈ ಕೈ ಮಿಲಾಯಿಸಿಕೊಂಡಿದ್ರು.ವಸಂತ ನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಬಾಡಿ ಬಿಲ್ಡ್ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಟೀಂ ಮತ್ತು ದುನಿಯಾ ವಿಜಯ್ ಟೀಂ ಗೂ ಗಲಾಟೆನಡೆದಿತ್ತು.
ಆ ದಿನ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಸಹೋದರ ಮಾರುತಿ ಗೌಡ ಸ್ಫರ್ಧೆ ಮಾಡಿದ್ರು. ಈ ವೇಳೆ ಮಾರುತಿಗೌಡನನ್ನು ಕಾರಲ್ಲಿ ಕರೆದೊಯ್ದಿದ್ದ ವಿಜಯ್ ಕಾರಿನಲ್ಲಿ ಮಾರುತಿಗೆ ಹಿಗ್ಗಮುಗ್ಗ ಥಳಿಸಿದ್ರು.ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಬಿಟ್ಟಿದ್ರು. ಇದಾದ ನಂತರ ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು.ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರೆ.ಪಾನಿಪುರಿ ಕಿಟ್ಟಿ ತನ್ನ ತಮ್ಮನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ವಿಜಯ್ ಮೇಲೆ ಕೊಲೆ ಯತ್ನದ ಕೇಸ್ ದಾಖಲಿಸಿದ್ರು.ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ನಲ್ಲಿ ನಡೀತಾ ಇದ್ದು,ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಕ್ಲೋಸ್ ಆಗಿತ್ತು. ಇದನ್ನ ಪ್ರಶ್ನಿಸಿ ವಿಜಿ ಕೋರ್ಟ್ ಮೊರೆ ಹೋಗಿದ್ರು. ವಿಜಿ ಮನವಿಯನ್ನ ಪುರಸ್ಕರಿಸಿರುವ ಕೋರ್ಟ್ ಇನ್ನೊಮ್ಮೆ ಕೇಸ್ ತನಿಖೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದು,ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ,ಮಾರುತಿ ಗೌಡ ಮೇಲೆ ಹೈಗ್ರೌಂಡ್ ಠಾಣೆಯಲ್ಲಿ FIR. ದಾಖಲಾಗಿದೆ..ಈಗಾಗಲೇ ಪಾನಿಪುರಿ ಕಿಟ್ಟಿಗೆ ನೋಟೀಸ್ ನೀಡಲಾಗಿದೆ, ಶೇಷಾದ್ರಿ ಪುರಂ ಎಸಿಪಿ ತನಿಖೆ ನಡೆಸುತ್ತಾರೆಂದು ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ರು.