ರಿಷಭ್‌ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?

Sampriya

ಬುಧವಾರ, 6 ನವೆಂಬರ್ 2024 (19:20 IST)
Photo Courtesy X
ಬೆಂಗಳೂರು: ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್‌ ಶೆಟ್ಟಿ ಅವರು ಜೈ ಹನುಮಾನ್ ಸಿನಿಮಾದಲ್ಲಿ ನಟಿಸುತ್ತಿರುವ ಘೋಷಣೆ ಹೊರಬಿದ್ದ ಬೆನ್ನಲ್ಲೇ ತೆಲುಗು ಖ್ಯಾತ ನಟ ರಾಣಾ ದಗ್ಗುಬಾಟಿ ಕೂಡ ಈ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಕೇಳಿಬಂದಿದೆ.

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಅವರು ಜೈ ಹನುಮಾನ್ ಸಿನಿಮಾ ತಂಡದ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ರಿಷಬ್ ಶೆಟ್ಟಿ ಮತ್ತು ರಾಣಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜೈ ಜೈ ಹನುಮಾನ್ ಎಂದು ಅಡಿಬರಹ ನೀಡಿದ್ದಾರೆ.

ಪ್ರಶಾಂತ್‌, ರಿಷಬ್‌ ಜೊತೆಗಿನ ರಾಣಾ ಫೋಟೋ ಮತ್ತು ಅಡಿಬರಹ ನೋಡಿ ಈ ಸಿನಿಮಾದಲ್ಲಿ ಅವರು ನಟಿಸುವ ಕುರಿತು ಚರ್ಚೆಯಾಗುತ್ತಿದೆ.

ರಾಣಾ ದಗ್ಗುಬಾಟಿ ಅವರು ಚಿತ್ರದಲ್ಲಿ ಶ್ರೀ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಚಿತ್ರತಂಡ ಅಧಿಕೃತವಾಗಿ ಘೋಷಿಸುವವರೆಗೂ ಕಾದುನೋಡಬೇಕಿದೆ.  

ಇನ್ನೂ ಇತ್ತೀಚೆಗೆ ರಿಷಭ್‌ ಶೆಟ್ಟಿ ಹನುಮಂತನ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು. ರಿಷಬ್ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಕಾಂತಾರ ಪ್ರಿಕ್ವೇಲ್‌ ಸಿನಿಮಾದ ಬಳಿಕ ಈ ಚಿತ್ರದ ಮೇಲೆಯೂ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ