ಮಾಲ್ಡೀವ್ಸ್‌ಗೆ ಪಯಣ ಆರಂಭಿಸಿದ ಪ್ರಣಯ ಜೋಡಿ ರಣಬೀರ್-ಕತ್ರಿನಾ

ಶುಕ್ರವಾರ, 24 ಏಪ್ರಿಲ್ 2015 (10:14 IST)
ಎರಡು ವರ್ಷಗಳ ಹಿಂದೆ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಇಬ್ಬರೂ ಯಾರಿಗೂ ತಿಳಿಯದಂತೆ ಸ್ಪೆಯಿನ್ ಗೆ ಹೋಗಿದ್ದರು. ಅಲ್ಲಿರುವ ಬೀಚ್ ನಲ್ಲಿ ಈಜು ಉಡುಗೆ ಧರಿಸಿ ವಿಹರಿಸಿದ ದೃಶ್ಯಗಳನ್ನು ಯಾರೋ ತಮ್ಮ ಕ್ಯಾಮರಾದಲ್ಲಿ ಬಂಧಿಸಿ ಅಂತರಜಾಲದಲ್ಲಿ ಹಾಕಿದ್ದರು. ಇದರಿಂದ ಅವರ ಬದುಕಿನ ರಹಸ್ಯ ಸ್ವಲ್ಪ ಪ್ರಮಾಣದಲ್ಲಿ ಹೊರ ಬಂದಿತ್ತು. 
ಈಗ ಮತ್ತೆ ಈ ಜೋಡಿ ವಿಹಾರಯಾತ್ರೆಗೆ ಹೊರಟಿದ್ದಾರೆ. ಈಬಾರಿ ಇವರಿಬ್ಬರೂ ತಮ್ಮ ಟೂರ್ ನ್ನು ಬೇರೆಯವರಿಗೆ ಗೊತ್ತಾಬಾರದು ಎಂದು ನಿರೀಕ್ಷೆ ಮಾಡಿಲ್ಲ. ಏಕೆಂದರೆ ಇವರಿಬ್ಬರೂ ಫ್ಲೈಟ್ ಹತ್ತಿದ್ದು ಒಂದಷ್ಟು ಜನರು ಕಂಡಿದ್ದಾರೆ, ಈ ಜೋಡಿ ಆ ಬಳಿಕ ಮಾಲ್ಡೀವ್ಸ್ ನಲ್ಲಿ ಈ ಜೋಡಿ ಇಳಿದದ್ದು ಒಂದಷ್ಟು ಜನರ ಕಣ್ಣಿಗೆ ಬಿದ್ದಿದೆ. 
 
ಎರಡು ವರ್ಷಗಳ ಹಿಂದೆ ಈಜುಡುಗೆ ಧರಿಸಿ ಎಲ್ಲರ ಗಮನಕ್ಕೆ ಬಿದ್ದಿದ್ದ ಈ ಜೋಡಿ ಈಗ ಯಾವರೀತಿ ಸಿಗುತ್ತಾರೋ ಎನ್ನುವ ಕಾತುರ ಬಾಲಿವುಡ್ ಸಿನಿಮಂದಿಯಲ್ಲಿದೆ. ಇತ್ತೀಚಿಗೆ ಪಂಚತಾರ ಹೋಟೆಲ್ ನಲ್ಲಿ ರಣಬೀರ್ ಅವರ ಕುಟುಂಬದ ಸದಸ್ಯರನ್ನು ಕತ್ರಿನಾ ಭೇಟಿಯಾಗಿದ್ದಳು. ಈಗ ಅವರು ತಮ್ಮ ಮನೆ ಸೊಸೆಯಾಗಿ ಮಾಡಿಕೊಳ್ಳುವುದಕ್ಕೆ ಸಮ್ಮತಿ ನೀಡಿರಬಹುದು ಎಂದು ಕಾಣುತ್ತದೆ. ಒಟ್ಟಾರೆ ಈಗ ಮದುವೆಗೆ ಮುನ್ನ ಒಂದು ಹನಿಮೂನ್‌ಗೆ ಹೊರಟಿದ್ದಾರೆ ಎಂದು ಕಾಣುತ್ತದೆ. ಮದುವೆ ಇನ್ನು ಸಮಯ ಇದೆಯಲ್ಲ  ಆದ ಬಳಿಕ ಪುನಃ ಹೋಗುತ್ತಾರೆ ಎರಡನೇ ಬಾರಿ ಎಂದು ಹೇಳುತ್ತಿದ್ದಾರೆ ಬಾಲಿವುಡ್ ಕುಹುಕಿಗಳು!

ವೆಬ್ದುನಿಯಾವನ್ನು ಓದಿ