ಮತ್ತೆ ಕತ್ರೀನಾ ಕೈಫ್ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರಾ ರಣ್ ಬೀರ್ ಕಪೂರ್ ?

ಶುಕ್ರವಾರ, 12 ಫೆಬ್ರವರಿ 2016 (11:25 IST)
ಬಾಲಿವುಡ್‌ನ ಕ್ಯೂಟ್ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದ  ಕತ್ರೀನಾ ಹಾಗೂ ರಣ್ ಬೀರ್ ಕಪೂರ್ ಪರಸ್ಪರ ದೂರವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದಾಗಿ ಇಬ್ಬರೂ ಕೊಂಚ ಡಲ್ ಆಗಿರೋದು ನಿಜ.ಆದ್ರೆ ಇದೀಗ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಸುದ್ದಿ ಇನ್ನು ಇಂಟರೆಸ್ಟಿಂಗ್ ಆಗಿದೆ.

 
ಕೆಲ ದಿನಗಳ ಹಿಂದೆ ರಣ್ವೀರ್ ಕಪೂರ್ ಹಾಗೂ ಕ್ಯಾಟ್ ಪರಸ್ಪರ ದೂರವಾಗಿದ್ದಾರೆ ಅನ್ನೋದು ಸುದ್ದಿ ವಾಹಿನಿ ಹಾಗೇ ಪತ್ರಿಕೆಗಳಲ್ಲಿ ಹೆಡ್ ಲೈನ್ ಸುದ್ದಿಯಾಗಿತ್ತು. ಕತ್ರೀನಾ ಹಾಗೂ ರಣ್ಬೀರ್ ಪ್ರೇಮ ಜೀವನಕ್ಕೆ ಬ್ರೇಕ್ ಬಿದ್ದಿದೆ. ಅವರಿಬ್ಬರೂ ದೂರವಾಗಿದ್ದಾರೆ ಅಂತಾ ಹೇಳಲಾಗಿತ್ತು. ಅಲ್ಲದೇ ರಣ್ಬೀರ್ ಹಾಗೂ ಕತ್ರೀನಾ ವಾಸವಿದ್ದ ತಮ್ಮ ಅಪಾರ್ಟ್ ಮೆಂಟ್ ನಲ್ಲೂ ಇಬ್ಬರೂ ಜೊತೆಯಾಗಿ ವಾಸಿಸುತ್ತಿಲ್ಲ ಅಂತಾ ಸುದ್ದಿಯಾಗಿತ್ತು. ಕ್ಯಾಟ್ ಹಾಗೂ ರಣ್ಬೀರ್ ಕೂಡ ದೂರವಾಗಿರೋದು ನಿಜ ಎಂದಿದ್ದರು. ಆದ್ರೀಗ ರಣ್ ಬೀರ್ ಮತ್ತೆ ಕತ್ರೀನಾ ಅವರನ್ನು ಸೆಳೆಯೋದಕ್ಕೆ ಯತ್ನಿಸುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ.
 
ಹೌದು.. ಕತ್ರೀನಾ ಅವರು ನೀಡಿದ್ದ ಕೆಲ ಟಿಪ್ಸ್ ಗಳನ್ನು ರಣ್ಬೀರ್ ಈಗಲೂ ಪಾಲಿಸುತ್ತಿದ್ದಾರೆ.ಆ ಮೂಲಕ ಕತ್ರೀನಾ ಅವರ ಮಾತನ್ನು ಪಾಲಿಸುತ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಇನ್ನು ಕೆಲ ಪ್ರೊಫೆಶನಲ್ ಸಲಹೆಗಾಗಿ ಕ್ಯಾಟ್ ರಣ್ಬೀರ್ ಅವರನ್ನು ಆಸ್ಟ್ರೇಲಿಯನ್ ಕ್ಲಿನಿಕ್ ಒಂದಕ್ಕೆ ಕರೆದೊಯ್ಯುತ್ತಿದ್ದರಂತೆ. ಈಗಲೂ ಕ್ಯಾಟ್ ಅದೇ ಕ್ಲಿನಿಕ್ ಗೆ ಹೋಗುತ್ತಾರಂತೆ. ಆ ಮೂಲಕ ಕ್ಯಾಟ್ ಹೇಳಿಕೊಟ್ಟ ಟಿಪ್ಸ್ ಗಳನ್ನು ಪಾಲಿಸಿ ಮತ್ತೆ ಅವರನ್ನು ಸೆಳೆಯೋ ಯತ್ನ ಮಾಡುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.

ವೆಬ್ದುನಿಯಾವನ್ನು ಓದಿ