ಕತ್ರಿನಾ ಜೊತೆ ರಣಬೀರ್ ಮದುವೆ ಆಗೇ ಆಗ್ತಾರಂತೆ .. ಹಾಗಂತ ಬೆಟ್ಸ್ ಕಟ್ಟಿದ್ದಾರಂತೆ!

ಸೋಮವಾರ, 20 ಅಕ್ಟೋಬರ್ 2014 (13:42 IST)
ಬಾಲಿವುಡ್ ನಲ್ಲಿ ಅನೇಕ ತಾರ ಜೋಡಿ ಪ್ರೇಮದಲ್ಲಿ ಮುಳುಗಿ ಏಳಲಾಗದೆ ಒದ್ದಾಡುತ್ತಿದ್ದಾರೆ. ಅವರಲ್ಲಿ ಕತ್ರಿನ ಕೈಫ್ ಮತ್ತು ರಣಬೀರ್ ಕಪೂರ್ ಜೋಡಿ ಸಹ ಒಂದು. ಈ ಸುಂದರ ಜೋಡಿ ಅನೇಕ ವಿವಾದಗಳಿಂದ ಹೆಚ್ಚು ಸುದ್ದಿ ಮಾಡಿದ್ದರು. 
 
ಈ ಜೋಡಿಯ ಸ್ಪೇನ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿತ್ತು. ಈಗ ಈ ಜೋಡಿ ಒಟ್ಟಿಗೆ ಬದುಕುತ್ತಿದ್ದಾರೆ. ಕಟ್ ಮತ್ತು ರಣಬೀರ್ ಒಂದೇ ಮನೆಯಲ್ಲಿ ಲೀವ್ ಇನ್ ನಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಮದುವೆ ಬಗ್ಗೆ  ಯಾವ ಮಾತು ಆಡದ ಈ ಜೋಡಿ ಬಾಂದ್ರದಲ್ಲಿ ಇರುವ ಮೂರು ಅಂತಸ್ತುಗಳ ಅಪಾರ್ಟ್ ಮೆಂಟ್ ನಲ್ಲಿ ಬದುಕನ್ನು ನಡೆಸುತ್ತಿದ್ದಾರೆ. 
 
ಈ ಮೊದಲು ತನ್ನ ತಾಯಿ ತಂದೆ ಜೊತೆ ರಣಬೀರ್ ಪಾಲಿ ಹಿಲ್ ಫ್ಯಾಮಿಲಿ ರೆಸಿಡೆನ್ಸ್ ನಲ್ಲಿ ವಾಸಿಸುತ್ತಿದ್ದರು. ಆದರೆ ಕಟ್ ಜೊತೆ ಉಂಟಾದ ಪ್ರಣಯವನ್ನು ಆತನ ತಾಯಿತಂದೆಗೆ ಒಪ್ಪದ ಕಾರಣ ರಣಬೀರ್ ಮನೆ ಬಿಟ್ಟು ಕತ್ರಿನ ಜೊತೆ ವಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ಟ್ಯಾನ್ಸಿಲ್ಸ್ ಆಪರೇಷನ್  ಮಾಡಿಸಿಕೊಂಡಿರುವ ರಣಬೀರ್ ನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾಳಂತೆ ಕಟ್! 
 
ಮದುವೆ ಆಗದೆ ಒಟ್ಟಿಗೆ ಇರುವುದು ಸಾಮಾನ್ಯ ಸಂಗತಿ ಬಾಲಿವುಡ್ ನಲ್ಲಿ . ಅನೇಕ ಸ್ಟಾರ್ಗಳು ಅದೇರೀತಿ ಇದ್ದು ಈಗ ಕೆಲವರು ಮದುವೆ ಆಗಿದ್ದರೆ, ಒಂದಷ್ಟು ಜನ ಲೀವ್ ಇನ್ ಇದ್ದರೂ ಈಗ ಬೇರ್ಪಟ್ಟು ಬೇರೆ ಮದುವೆ ಆಗಿದ್ದಾರೆ. ಪ್ರಸ್ತುತ ಹೀಗೆ ಬದುಕನ್ನು ನಡೆಸುತ್ತಿರುವ ಕತ್ರಿನ ಮತ್ತು ರಣಬೀರ್ ಮುಂದೊಂದು ದಿನ ಗ್ಯಾರೆಂಟಿ ಮದುವೆ ಆಗ್ತಾರೆ ಎಂದು ಕೆಲವು ಬಾಲಿವುಡ್ ಮಂದಿ ಬೆಟ್ ಕಟ್ಟಿದ್ದಾರೆ. 
 

ವೆಬ್ದುನಿಯಾವನ್ನು ಓದಿ