ನಾನು ಅನುಮತಿ ನೀಡುವವರೆಗೆ ರಣಬೀರ್ ಮದುವೆಯಾಗಲು ಸಾಧ್ಯವಿಲ್ಲ: ದೀಪಿಕಾ ಪಡುಕೋಣೆ

ಸೋಮವಾರ, 23 ನವೆಂಬರ್ 2015 (17:08 IST)
ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಲವ್ ಸ್ಟೋರಿ ಮನೆಮಾತಾಗಿರುವಂತೆಯೇ ನನ್ನ ಅನುಮತಿಯಿಲ್ಲದೇ ರಣಬೀರ್ ವಿವಾಹವಾಗುವಂತಿಲ್ಲ ಎಂದು ಬಾಲಿವುಡ್ ಹಾಟ್ ನಟಿ ದೀಪಿಕಾ ಪಡುಕೋಣೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. 
ದೀಪಿಕಾಳ ಜೊತೆ ಸುಮಾರು ಒಂದು ವರ್ಷಗಳ ಕಾಲ ಲವ್ವಿ ಡವ್ವಿ ನಡೆಸಿದ್ದ 33 ವರ್ಷ ವಯಸ್ಸಿನ ರಣಬೀರ್ ಕಪೂರ್, ಆಕೆಯೊಂದಿಗೆ ಆತ್ಮಿಯ ಗೆಳೆತನದ ಸಂಬಂಧ ಮುಂದುವರಿಸಿದ್ದಾರೆ ಎನ್ನಲಾಗಿದೆ.  
 
ನಾನು ಅನುಮತಿ ನೀಡುವವರೆಗೆ ರಣಬೀರ್ ಮದುವೆಯಾಗುವ ಮಾತೇ ಇಲ್ಲ ಎಂದು ದೀಪಿಕಾ ನುಲಿದಿದ್ದಾರೆ.
 
ಬಾಲಿವುಡ್ ಹಾಟ್ ಬೆಡಗಿ ಕತ್ರಿನಾಳೊಂದಿಗೆ ಡೇಟಿಂಗ್ ನಡೆಸಿರುವ ರಣಬೀರ್, ವಿವಾಹ ನನ್ನ ಜೀವನದಲ್ಲಿ ದೊಡ್ಡ ಪ್ರಶ್ನೆಯಾಗಿದೆ. ನನಗೆ ಅರೇಂಜ್ಡ್ ಮ್ಯಾರೇಜ್‌ನಲ್ಲಿ ನಂಬಿಕೆಯಿದೆ. ಆದ್ದರಿಂದ, ನಾನು ವಿವಾಹವಾಗುವಾಗ ಪ್ರತಿಯೊಬ್ಬರಿಗೂ ತಿಳಿಯುತ್ತದೆ ಎಂದು ಹೇಳಿದ್ದಾನೆ.
 
ಬಚ್ನಾ ಎ ಹಸೀನೋ ಮತ್ತು ಯೇ ಜವಾನಿ ಹೈ ಚಿತ್ರದಲ್ಲಿ ನಟಿಸಿದ ನಂತರ, ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ಮಿಸುತ್ತಿರುವ ತಮಾಷಾ ಚಿತ್ರದಲ್ಲಿ ರಣಬೀರ್ ಮತ್ತು ದೀಪಿಕಾ ಜೊತೆಯಾಗಿ ಮೂರನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.  
 

ವೆಬ್ದುನಿಯಾವನ್ನು ಓದಿ