20 ವರ್ಷ ಪೂರೈಸಿದ ರಂಗೀಲಾ ಸಿನಿಮಾ

ಗುರುವಾರ, 10 ಸೆಪ್ಟಂಬರ್ 2015 (10:35 IST)
ಥ್ರಿಲ್ಲರ್ ಸಿನಿಮಾ ಅಂದ್ರೆ ದಕ್ಷಿಣಭಾರತದಲ್ಲಿ ಥಟ್ಟನೆ ನೆನಪಾಗೋದು ರಾಮ್ ಗೋಪಾಲ್ ವರ್ಮಾ. ಪೂಂಕ್, ರಕ್ತಚರಿತ್ರಾ ಸಿನಿಮಾಗಳನ್ನು ನೋಡಿದ್ರೆ ಆರ್ ಜಿವಿ ಸಿನಿಮಾ ಶೈಲಿ ಹೇಗಿರುತ್ತೆ ಅನ್ನೋದು ಗೊತ್ತಾಗಿ ಬಿಡುತ್ತೆ. ಇದೇ ರಾಮ್ ಗೋಪಾಲ ವರ್ಮಾ 1995ರಲ್ಲಿ ನಿರ್ದೇಶಿಸಿದ ರಂಗೀಲಾ ರೇ ಸಿನಿಮಾ ಇದೀಗ ಬರೋಬ್ಬರಿ 20 ವರ್ಷ ಪೂರೈಸಿದೆ.
ಭೂತ್, ಕಂಪನಿ, ರಣ್, ಸರ್ಕಾರ್ ಹೀಗೆ ವರ್ಮಾ ಸಿನಿರಸಿಕರಿಗೆ ವಿವಿಧ  ಕಥಾಹಂದರಗಳಿರುವ ಸಿನಿಮಾಗಳನ್ನು ನೀಡಿದ್ದಾರೆ. ಆದ್ರೆ ಇವುಗಳೆಲ್ಲದರ ನಡುವೆ ಹೆಚ್ಚು ಕಾಡುವ ಆರ್ ಜಿವಿ ಸಿನಿಮಾ ಅಂದ್ರೆ ಅದು ರಂಗೀಲಾ. ಇದೇ ಸಿನಿಮಾ ವ್ರಮಾಗೆ ಬಾಲಿವುಡ್ ಅಂಗಳದಲ್ಲಿ ಸ್ಪೆಷಲ್ ಸ್ಥಾನಮಾನವನ್ನು ತಂದುಕೊಟ್ಟಿತ್ತು.
 
ಇನ್ನು ರಂಗೀಲಾ ಸಿನಿಮಾಗೆ ಸಂಗೀತ ಸಂಯೋಜಿಸಿರೋದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಆದ್ರೆ ಇಂದಿಗೂ ಆ ಸಿನಿಮಾದ ಖ್ಯಾತಿ ಮಾತ್ರ ಊರ್ಮಿಳಾಗೆ ಸಲ್ಲಬೇಕು ಅನ್ನುವ ವರ್ಮಾ ಮಾತು ಊರ್ಮಿಳಾ ಅಭಿನಯ ಸಿನಿಮಾದಲ್ಲಿ ಹೇಗಿತ್ತು ಅನ್ನೋದನ್ನು ಸಾರಿ ಹೇಳುತ್ತೆ.
 

ವೆಬ್ದುನಿಯಾವನ್ನು ಓದಿ