ಅಪರೂಪದ ಚಿತ್ರ ರಂಗಿತರಂಗ : ರಘು ದೀಕ್ಷಿತ್

ಮಂಗಳವಾರ, 28 ಜುಲೈ 2015 (10:28 IST)
ರಂಗಿತರಂಗ ಹೆಸರೇ ಭಿನ್ನತೆಯಿಂದದ ಕೂಡಿದೆ. ಈ ಚಿತ್ರದ ಬಿಡುಗಡೆಯು ಆದ ದಿನದಿಂದ ಉತ್ತಮ  ಗಳಿಕೆ ಮಾಡುತ್ತಾ ಮುಂದೆ ಸಾಗಿದೆ. ಬಲಿಷ್ಠ ಬಾಹುಬಲಿಯನ್ನು ತನ್ನ ಕಥೆ,ನಿರೂಪಣೆ, ಪಾತ್ರಗಳ ಆಯ್ಕೆ ಹಾಗೂ ಅವರ ನಟನೆಯ ಮೂಲಕ ಮಣಿಸಿದೆ. ನಾವು ನಮ್ಮ ಕೆಲಸ ಪ್ರಾಮಾಣಿಕವಾಗಿ  ಮಾಡಿದ್ದೇವೆ, ಆದ ಕಾರಣ ಜನರು ಅದನ್ನು ಪ್ರೀತಿಯಿಂದ  ಸ್ವೀಕರಿಸಿದ್ದಾರೆ ಎನ್ನುವ ಭಾವ ಹೊಂದಿರುವ ಈ ತಂಡ ಗೆಲುವಿನ ಹಾದಿಯಲ್ಲಿ ಸಾಗಿದೆ. ಪವನ್ ವಡೆಯರ್ ಲೂಸಿಯಾ ಸಹಿತ ಇಂತಹದ್ದೇ ವಿಭಿನ್ನ ಕಥೆಯನ್ನು ಹೊಂದಿತ್ತು. ಅದು ಬೇರೆ ಭಾಷೆಗಳಲ್ಲೂ ಸಹಿತ ನಿರ್ಮಾಣ ಆಗಲು ತಯಾರಿ ನಡೆಸಿತು. ಆದರೆ ಕರ್ನಾಟಕದ ಜನರನ್ನು ಅಷ್ಟೊಂದು ಸೆಳೆಯಲಿಲ್ಲ. ರಂಗಿತರಂಗ ವಿಷಯದಲ್ಲಿ ಹಾಗಲ್ಲ. ಜನರು ಆ ಚಿತ್ರವನ್ನು ಸ್ವೀಕರಿಸಿದ್ದಾರೆ. 
ನಿರೂಪ್ ಭಂಡಾರಿ ನಟನೆಯ ಚಿತ್ರದಲ್ಲಿ ಹಿರಿಯ ನಟ ಸಾಯಿ ಕುಮಾರ್ ಅವರ ನಟನೆಯು ಸಹ ಅಪಾರ ಜನರ ಗಮನ ಸೆಳೆದಿದೆ. ಈ ಚಿತ್ರವನ್ನು ಇತ್ತೀಚೆಗೆ ಪ್ರಸಿದ್ಧ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ವೀಕ್ಷಿಸಿದರು. ಅವರು ಅನೀಶ್ ಸಂಗೀತ ಹಾಗೂ  ಸಿನಿಮಾ ಕಥೆ ಮತ್ತು ಕಲಾವಿದರ ನಟನೆಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಅದ್ಭುತವಾದ ಹಿನ್ನಲೆ ಸಂಗೀತ, ಅಪರೂಪದ ಚಿತ್ರ ರಂಗಿತರಂಗ ಎಂದು ಹೇಳಿರುವ ಈ ಸಂಗೀತ ನಿರ್ದೇಶಕ ಅನೀಶ್ ಸಂಗೀತ ಮನ ಸೆಳೆಯುತ್ತದೆ ಎಂದು ಸಹಿತ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ