ಆದ್ರೀಗ ರಾಣಿ ಮುಖರ್ಜಿ ತಾಯಿಯಾಗುತ್ತಿರೋದು ನಿಜ ಅಂತಾ ಅವರ ನಾದಿನಿ ಜ್ಯೋತಿ ಮುಖರ್ಜಿ ಖಚಿತ ಪಡಿಸಿದ್ದಾರೆ. ಆದ್ರೆ ರಾಣಿ ಮುಖರ್ಜಿ ಮಾತ್ರ ಈ ಸಂತಸದ ಸುದ್ದಿಯನ್ನು ಯಾರಿಗೂ ಖಚಿತಪಡಿಸಿಲ್ಲ. ಆದರೆ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರುವ ಜ್ಯೋತಿ ರಾಣಿ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದಿದ್ದಾರೆ. ರಾಣಿ ಲಂಡನ್ ನಲ್ಲಿ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ನೀಡುವ ಮಸಾಜ್ ಸೆಂಟರ್ ನಲ್ಲಿ ಕಾಣಿಸಿಕೊಂಡಗಾಲೇ ಅವರು ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಬೀ ಟೌನ್ ನಲ್ಲಿ ಗುಲ್ಲೆದ್ದಿತ್ತು.