ಕಿಚ್ಚ ಸುದೀಪ್ ಅವರ ನಟನೆಯ ರೀಮೇಕ್ ಚಿತ್ರ ಅತ್ತಾರಿಂಟಿಕಿ ದಾರೇದಿ ಗೆ ಕನ್ನಡದಲ್ಲಿ ಯಾವ ಹೆಸರನ್ನು ನೀಡಲಾಗುತ್ತದೆ ಎನ್ನುವ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಅತ್ತೆ ಮನೆಗೆ ದಾರಿ ಎಲ್ಲಿ ಎನ್ನುವ ಹೆಸರು ಇಡಬಹುದು ಎನ್ನುವ ಗುಸುಗುಸು ಸಹಿತ ಹರಡಿತ್ತು. ಆದರೆ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಆ ಚಿತ್ರಕ್ಕೆ ಈಗ ಮೂರು ಹೆಸರು ಕೇಳಿ ಬಂದಿದೆ . ಅವುಗಳಲ್ಲಿ ರನ್ನ, ಭಗೀರಥ ಅಥವಾ ರಾಯಬಾರಿ.
ಈ ಚಿತ್ರವನ್ನು ನಂದ ಕಿಶೋರ್ ಅವರು ನಿರ್ದೇಶಿಸುತ್ತಾ ಇದ್ದಾರೆ. ಹರಿಪ್ರಿಯ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ದೇವರಾಜ್, ಶರತ್ ಲೋಹಿತಾಶ್ವ, ಪ್ರಕಾಶ್ ರೈ, ಮಧುಬಾಲ ಈ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.