ಭಾಜೀರಾವ್ ಮಸ್ತಾನಿ ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ- ಪ್ರಿಯಾಂಕ

ಮಂಗಳವಾರ, 1 ಡಿಸೆಂಬರ್ 2015 (14:16 IST)
ಸಂಜಯ್ ಲೀಲಾ ಬನ್ಸಾಲಿ ಅಭಿನಯದ ಭಾಜೀರಾವ್ ಮಸ್ತಾನಿ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈಗಾಗಲೇ ದೀಪಿಕಾ ಹಾಗೂ ರಣ್ ವೀರ್ ಸಿಂಗ್ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಮೊನ್ನೆ ಪ್ರಿಯಾಂಕ ಛೋಪ್ರಾ ಕೂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ರು. ಇದೇ ವೇಳೆ ಮಾತನಾಡಿದ ಪ್ರಿಯಾಂಕ ಸಿನಿಮಾದಲ್ಲಿ ರಣ್ ವೀರ್ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದ್ರು.
 
 ಅಂದ್ಹಾಗೆ ಸಂಜಯ್ ಲೀಲಾ ಬನ್ಸಾಲಿ ಮೊದಲ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಅವರನ್ನು ಭಾಜೀರಾವ್ ಮಸ್ತಾನಿ ಸಿನಿಮಾದ ನಾಯಕ ನಾಯಕಿರನ್ನಾಗಿಸಬೇಕು ಅಂದುಕೊಂಡಿದ್ರಂತೆ.ಆದ್ರೆ ಅವರು ಒಪ್ಪದೇ ಇದ್ದುದರಿಂದ ರಣ್ ವೀರ್, ದೀಪಿಕಾ ಹಾಗೂ ಪ್ರಿಯಾಂಕ ಅವರನ್ನು ಆಯ್ಕೆ ಮಾಡಿದ್ರು.ಆದ್ರೆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅಭಿನಯಿಸಿದ್ದರೆ ಎಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದರೋ ಅಷ್ಟೇ ಚೆಂದವಾಗಿ ಅವರಿಬ್ಬರೂ ಅಭಿನಯಿಸಿದ್ದಾರೆ ಅಂತಾ ಪಿಗ್ಗಿ ಹೇಳಿದ್ದಾರೆ. ಇನ್ನು ರಣ್ ವೀರ್ ಸಿಂಗ್ ಅಂತೂ ತುಂಬಾನ ಚೆನ್ನಾಗಿ ಅಭಿನಯಿಸಿದ್ದಾರೆಅಂತಾ ಪ್ರಿಯಾಂಕ ಹೊಗಳಿದ್ದಾರೆ.
 
 ಪೇಶ್ವೆ ಭಾಜೀರಾವ್ ಪ್ರೇಮಕಥೆಯಾಧಾರಿತ ಈ ಸಿನಿಮಾದಲ್ಲಿ ಪ್ರಿಯಾಂಕ ಕಾಶೀಬಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ತಿಂಗಳ 18 ರಂದು ರಿಲೀಸ್ ಆಗುತ್ತಿದೆ. ಇದೇ ದಿನ ಶಾರುಖ್ ಖಾನ್ ಅಭಿನಯದ ದಿಲ್ ವಾಲೇ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ