ಸ್ವೀಟಾ ಸ್ವೀಟಾ ಎಂದು ಪರಿಣಿತಿಗೆ ಹೊಸ ಹೆಸರು ಕೊಟ್ಟ ರಣವೀರ್ ಸಿಂಗ್

ಸೋಮವಾರ, 6 ಅಕ್ಟೋಬರ್ 2014 (12:54 IST)
ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ಅವರ ಹೆಸರಿಗಿಂತ ಬೇರೆ ಹೆಸರಿನ ಮೂಲಕ ಕರೆಯುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಆಕೆಯ ಬದುಕಲ್ಲಿ ಮೊಟ್ಟ ಮೊದಲು ಆ ರೀತಿ ಕರೆಯುವುದು ಅವರ ತಾಯಿತಂದೆ ಆ ಬಳಿಕ ಆಕೆಯ ಪ್ರಿಯತಮ ಅಥವಾ ಗಂಡ ! ಆದರೆ ಸಾಮಾನ್ಯವಾಗಿ  ಫ್ರೆಂಡ್ಸ್ ಕೆಲವು ಸಂದರ್ಭಗಳಲ್ಲಿ ಕರೆಯುತ್ತಾರೆ. 
 
ಈಗ ಪರಿಣಿತಿ ವಿಷಯದಲ್ಲೂ ಸಹಿತ ಅದೇರೀತಿ ಆಗಿದೆ. ಆಕೆಯ ಹೆಸರನ್ನು ರಣವೀರ್ ಸಿಂಗ್ ಪ್ರೀತಿಯಿಂದ ಪರಿಣಿತಾ ಎಂದು ಕರೆಯದೆ ಸ್ವೀಟಾ ಎಂದು ಕರೆಯುತ್ತಾರೆ. ಆಕೆಯ ಹೆಸರನ್ನು ಮುದ್ದಾಗಿ ಕರೆಯುವ ಹೀರೋ ರಣವೀರ್ ಸಿಂಗ್ ಆ ಮುಖಾಂತರ ಸಿನಿಮಾ ಸೆಟ್ ನಲ್ಲಿ ಇದ್ದವರ ಗಮನ ಸೆಳೆದಿದ್ದಾರಂತೆ. 
 
ಕಿಲ್ ದಿಲ್  ಎನ್ನುವ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ಈ ಜೋಡಿಯನ್ನು ಸ್ವೀಟಾ ಎಂದು ಕರೆಯುವ ರಣವೀರ್ ಇವರಿಬ್ಬರು ಒಟ್ಟಾಗಿ ಕೆಲಸ ಮಾಡುತ್ತಿರುವುದು ಈಗ ಎರಡನೇ ಬಾರಿ. ರಣವೀರ್ ಹೀಗೆ ಸ್ವೀಟಾಗಿ ಮುದ್ದಾದ ಹುಡುಗಿಯನ್ನು ಕರೆಯುತ್ತಿದ್ದರೆ ಮತ್ತಷ್ಟು ಮುದ್ದುಮುದ್ದಾಗಿ ಆಡ್ತಾ ಇದ್ದಾಳಂತೆ ಆ ಚೆಲುವೆ. 
 
ಅವರಿಬ್ಬರೂ ಶೂಟಿಂಗ್ ಸ್ಪಾಟನ್ನು ಪಿಕ್ ನಿಕ್ ಸ್ಪಾಟ್ ಆಗಿ ಮಾಡಿಕೊಂಡಿರುವ ಈ ಜೋಡಿ ಸಮಯವನ್ನು ಜೋಕ್ ಕಟ್ ಮಾಡಿಕೊಂಡು ಹಾಯಾಗಿ ಕಳೆಯುತ್ತಾ ಇದ್ದಾರಂತೆ. ಅಂದಂಗೆ  ಹೀಗೆ ಕರೆಯುವುದು ಬಹಳ ಜನರಿಗೆ ಗೊತ್ತಿಲ್ಲ.. ಗೊತ್ತಾದ ಬಳಿಕ ಸ್ವೀಟಾ   ಎಂದು ಕರೆಯುತ್ತಾರೇನೋ.. ಅಥವಾ ಇದು ರಣವೀರ್ ಪೇಟೆಂಟ್ ಹೆಸರೇನೋ .. ಒಟ್ಟಾರೆ ಸ್ವೀಟಾ ಸ್ವೀಟಾ ಈಗ ರಣವೀರ್ ಜೊತೆ ಸಿಹಿಯಾಗಿ ನಟಿಸುತ್ತಿದ್ದಾಳೆ ಅಷ್ಟೇ ಮತ್ತೆ ಏನೇನೋ ಯೋಚನೆ ಮಾಡ ಬೇಡಿ!

ವೆಬ್ದುನಿಯಾವನ್ನು ಓದಿ