ಮೆಗಾಸ್ಟಾರ್ ಚಿರಂಜೀವಿ ಕಾಲಿಗೆ ಬಿದ್ದ ನಟಿ ರಶ್ಮಿಕಾ ಮಂದಣ್ಣ

ಮಂಗಳವಾರ, 7 ಜನವರಿ 2020 (09:28 IST)
ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಜತೆಗೆ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಈಗ ಸಿನಿಮಾ ಬಿಡುಗಡೆಗಾಗಿ ಕಾದಿದ್ದಾರೆ.


ಈಗಾಗಲೇ ಸರಿಲೇರು ನೀಕೆವ್ವರು ಟ್ರೈಲರ್ ಬಿಡುಗಡೆಯಾಗಿದ್ದು ರಶ್ಮಿಕಾ ಬಬ್ಲಿ ಕ್ಯಾರೆಕ್ಟರ್ ಗೆ ಭಾರೀ ಮೆಚ್ಚುಗೆ ಸಿಕ್ಕಿದೆ. ಜತೆಗೆ ಪ್ರಿನ್ಸ್ ಮಹೇಶ್ ಬಾಬು ಆಕ್ಷನ್ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.

ಈ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನೆರವೇರಿದ್ದು, ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ನಡುವೆ ರಶ್ಮಿಕಾ ಚಿರಂಜೀವಿ ಕುಳಿತಿದ್ದ ಜಾಗಕ್ಕೆ ತೆರಳಿ ನೇರವಾಗಿ ಅವರ ಕಾಲಿಗೆ ನಮಸ್ಕರಿಸಿ ಅಲ್ಲಿಯೇ ಕುಳಿತು ವಿನಯಪೂರ್ವಕವಾಗಿ ಮಾತನಾಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನವರಿ 11 ರಂದು ಸಿನಿಮಾ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ