ಅಪ್ಪುಗೆಯ ಫೋಟೋ ಪ್ರಕಟಿಸಿ ನೆಟ್ಟಿಗರ ತಲೆಗೆ ಹುಳ ಬಿಟ್ಟ ರಶ್ಮಿಕಾ ಮಂದಣ್ಣ

ಶನಿವಾರ, 8 ಜನವರಿ 2022 (09:20 IST)
ಹೈದರಾಬಾದ್‍: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರನ್ನು ತಬ್ಬಿಕೊಂಡಿರುವ ಫೋಟೋ ಪ್ರಕಟಿಸಿ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ.

ರಶ್ಮಿಕಾ ಇತ್ತೀಚೆಗೆ ಗೋವಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದರೆಂದು ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಈಗ ರಶ್ಮಿಕಾ ವ್ಯಕ್ತಿಯೊಬ್ಬರನ್ನು ಅಪ್ಪಿಕೊಂಡಿರುವ ಫೋಟೋ ಪ್ರಕಟಿಸಿ ಲವ್ ಇಮೋಜಿ ಪ್ರಕಟಿಸಿರುವುದು ನೋಡಿ ನೆಟ್ಟಿಗರ ಹುಬ್ಬೇರಿದೆ.

ಈ ಫೋಟೋದಲ್ಲಿ ರಶ್ಮಿಕಾ ತಬ್ಬಿಕೊಂಡಿರುವುದು ವಿಜಯ್ ದೇವರಕೊಂಡ ಅವರನ್ನೇ ಇರಬಹುದೇ ಎಂಬ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ-ವಿಜಯ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಗಳಿವೆ. ಅದರ ಬೆನ್ನಲ್ಲೇ ಇಂತಹದ್ದೊಂದು ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ