ಕಿರಿಕ್ ಪಾರ್ಟಿ ಹೆಸರೆತ್ತದೇ ಇಂಡಸ್ಟ್ರಿಗೆ ಬಂದು 7 ನೇ ವರ್ಷದ ಬಗ್ಗೆ ಬರೆದುಕೊಂಡ ರಶ್ಮಿಕಾ ಮಂದಣ್ಣ

ಭಾನುವಾರ, 31 ಡಿಸೆಂಬರ್ 2023 (11:51 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನಿಮಾ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟವರು. ಇಂದು ಅವರು ಟಾಲಿವುಡ್, ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ.

ಆದರೆ ಪರಭಾಷೆಗಳಲ್ಲಿ ಕ್ಲಿಕ್ ಆದ ಮೇಲೆ ಕನ್ನಡವನ್ನು ಅವಗಣಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲೆ ಬಹಳ ಸಮಯದಿಂದಲೂ ಇದೆ. ಜೊತೆಗೆ ತಾವು ಬೆಳೆಯಲು ಕಾರಣವಾದ ಕಿರಿಕ್ ಪಾರ್ಟಿ ಸಿನಿಮಾವನ್ನು ಸಂದರ್ಶನಗಳಲ್ಲಿ ಹೇಳಲೂ ಹಿಂಜರಿಕೆ ತೋರಿದ್ದು ಇದೆ.

ನಿನ್ನೆ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾಗಿ 7 ವರ್ಷವಾಗಿತ್ತು. ಜೊತೆಗೆ ರಶ್ಮಿಕಾ ಕೂಡಾ ಈ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದ್ದರಿಂದ ಅವರ ವೃತ್ತಿ ಜೀವನಕ್ಕೂ 7 ವರ್ಷವಾಗಿದೆ.

ಈ ಬಗ್ಗೆ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶ ಬರೆದಿದ್ದಾರೆ. 7 ವರ್ಷಗಳಿಂದ ತಮ್ಮನ್ನು ಬೆಳೆಸಿ, ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ತಪ್ಪಿಯೂ ಕಿರಿಕ್ ಪಾರ್ಟಿ ಸಿನಿಮಾದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎನ್ನುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ